Connect with us

LATEST NEWS

ವಿಷನ್ ಡಾಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ ಉಡುಪಿ: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ ಸೆಪ್ಟೆಂಬರ್, 27 : ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿದಂತಹ ಜಿಲ್ಲೆ ಮೊದಲಿನಿಂದಲೂ ಸಹ ಎಲ್ಲಾ ಧಾರ್ಮಿಕ-ಸಾಂಸ್ಕçತಿಕ ಕ್ಷೇತ್ರಗಳಲ್ಲೂ ಅತ್ಯುತ್ತಮ ವಾತಾವರಣ ಹೊಂದಿ ಪ್ರವಾಸಿಗರನ್ನು ಹೆಚ್ಚು ಮನಸೆಳೆಯುವ ಜಿಲ್ಲೆಯಾಗಿದೆ. ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.


ಅವರು ಇಂದು ಜಿಲ್ಲಾಡಳಿತ , ಪ್ರವಾಸೋದ್ಯಮ ಇಲಾಖೆ ಉಡುಪಿ, ಮಲ್ಪೆ ಅಭಿವೃದ್ಧಿ ಸಮಿತಿ, ನೆಹರು ಯುವ ಕೇಂದ್ರ ,ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ, ಜಿಲ್ಲೆ ಹಾಗೂ ಸೌಟ್ಕ್&ಗೈಡ್ಸ್ ಇವರ ಸಹಯೋಗದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಘೋಷಣೆಯೊಂದಿಗೆ ಆಯೋಜಿಸಿದ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಷನ್ ಡೊಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ ಉಡುಪಿ ಎಂದು ಹೇಳಲು ಹೆಮ್ಮೆಯಾಗಿದೆ, ವಿಷನ್ ಡೊಕ್ಯಮೆಂಟ್ ಅಂತಿಮ ಹಂತದಲ್ಲಿದೆ. ಅದು ಪೂರ್ಣಗೊಂಡ ನಂತರ ಸರಕಾರಕ್ಕೆ ಸಲ್ಲಿಸಿ ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮಕ್ಕೆ ಆದ್ಯತೆ ಜಿಲ್ಲೆಯಾಗಿ ಪರಿಗಣಿಸಲಾಗುವುದು ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನೂ ಉತ್ತುಂಗಕ್ಕೇರಿಸಬೇಕೆAದು ಎಂಬುದು ಎಲ್ಲಾ ಅಧಿಕಾರಿ, ಹಾಗೂ ರಾಜಕಾರಣಿಗಳ ಆಶಯವಾಗಿದೆ. ಎಂದು ತಿಳಿಸಿದರು.


ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬರುವವರು ಬೇರೆಯವರಿಗೆ ತೊಂದರೆಯಗದ ರೀತಿಯಲ್ಲಿ ಪ್ರವಾಸವನ್ನು ಮಾಡಿ ಹೋಗಬೇಕೆಂದು ಮನವಿ ಮಾಡಿಕೊಂಡರು. ಬ್ಲೂ ಪ್ಲಾಗ್ ಬೀಚ್ ಸದ್ಯದಲ್ಲೇ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯಲಿದೆ. ಈಗಾಗಲೇ ರಾಷ್ಟ್ರೀಯ ಎಲ್ಲಾ ಜ್ಯೂರಿಗಳು ಅತ್ಯುತ್ತಮವಾಗಿ ಬೆಳವಣಿಗೆಯಾಗಿರುವ ಬೀಚ್ ಎಂದರೆ ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್ ಬ್ಲೂ ಪ್ಲಾಗ್ ಬೀಚ್ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.


ಪ್ರವಾಸೋದ್ಯಮಕ್ಕೆ ಉಡುಪಿ ಜಿಲ್ಲೆಯಲ್ಲಿ ಹೊಸ ಆಯಾಮವನ್ನು ಕೊಡ್ಬೇಕು, ಹೊಸತನವನ್ನು ನೀಡಬೇಕು, ಎಲ್ಲಾ ರಾಜ್ಯದ-ರಾಷ್ಟ್ರದ ಜನರು ಉಡುಪಿಯತ್ತ ಪ್ರವಾಸೋದ್ಯಮಕ್ಕೆ ಬರುವಂತಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಮಾಸ್ಕಗಳನ್ನು ತಯಾರಿಸಿ ಸರಕಾರಕ್ಕೆ ನೀಡಿದ ಇಶಿತಾ ಆಚಾರ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಗಣ್ಯರು ಬೀಚ್‌ನ ಸುತ್ತ-ಮುತ್ತ ಎಲ್ಲಾ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *