Connect with us

LATEST NEWS

ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಉಡುಪಿ ಸೆಪ್ಟೆಂಬರ್ 27: ಕೊರೊನಾ ಲಾಕ್ ಡೌನ್ ನಿಂದಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾದ ಹಿನ್ನಲೆ ಮುಂಬೈ ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.


ಹೋಟೆಲ್ ಉದ್ಯಮಿ ಸುನಿಲ್ ಶೆಟ್ಟಿ ಮೃತ ದುರ್ದೈವಿಯಾಗಿದ್ದಾರೆ. ಕಾರ್ಕಳ ಹಿರ್ಗಾನ ದ ಕೃಷ್ಣ ಬೆಟ್ಟುನಲ್ಲಿರುವ ಸ್ವಂತ ಮನೆಯಲ್ಲಿ ಸುನೀಲ್ ಅವರು ನಾಡ ಕೋವಿಯಿಂದ ತಲೆಗೆ ಗುಂಡು ಸಿಡಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ಪೂನಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ 45 ವರ್ಷದ ಸುನಿಲ್ ಕೋರೋನಾದ ಕಾರಣ ಉದ್ಯಮದಲ್ಲಿ ವಿಪರೀತ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.

ಆರ್ಥಿಕ ನಷ್ಟದಿಂದ ಖಿನ್ನತೆಗೆ ಒಳಗಾಗಿದ್ದ ಸುನಿಲ್ ಶೆಟ್ಟಿ ಆತ್ಮಹತ್ಯೆ ಮೂಲಕ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾರೆ ಎನ್ನಲಾಗಿದ್ದು. ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Facebook Comments

comments