LATEST NEWS
ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆ ಇನ್ನು ಕೋವಿಡ್ -19 ಆಸ್ಪತ್ರೆ
ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆ ಇನ್ನು ಕೋವಿಡ್ -19 ಆಸ್ಪತ್ರೆ
ಉಡುಪಿ ಮಾರ್ಚ್ 30: ಕರೋನ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ -19 ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ಜಿಲ್ಲಾಡಳಿತ ಮತ್ತು ಕೆಎಂಸಿ ಆಸ್ಪತ್ರೆ ವತಿಯಿಂದ ನಡೆದ ಜಂಟಿ ಪತ್ರಿಕಾ ಗೋಷ್ಠಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಉಡುಪಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ ಮಣಿಪಾಲ ಸಂಸ್ಥೆಯು ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಕರೊನ ವೈರಸ್ ಸೋಂಕಿತರಿಗೆ ಮೀಸಲಿಡಲು ನಿರ್ಧರಿಸಿದೆ ಎಂದರು.
100 ಹಾಸಿಗೆಗಳ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ 11 ಹಾಸಿಗೆಗಳಿರುವ ತೀವ್ರ ನಿಗಾ ಘಟಕ , 15 ಹಾಸಿಗೆ ಇರುವ ಹೈ ಡಿಪೆಂಡೆನ್ಸಿ ಯುನಿಟ್ , 36 ಸಿಂಗಲ್ ರೂಮ್ ಐಸೋಲೇಷನ್ ವಾರ್ಡ್ , 43 ಸಾಮಾನ್ಯ ಹಾಸಿಗೆಗಳ ಸಾಮಾನ್ಯ ವಾರ್ಡುಗಳು ಉಪಯೋಗವಾಗಲಿದೆ ಎಂದರು.
ಮಣಿಪಾಲ ಕೆಎಂಸಿ ಆಸ್ಪತ್ರ ಮತ್ತು ಡಾ.ಟಿಎಂಎ ಪೈ ಅಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗಳ ತಂಡವು ದಿನದ 24 ಗಂಟೆಗಳ ಕಾಲವೂ ಇಲ್ಲಿ ಕಾರ್ಯ ನಿರ್ವಹಿಸಲಿದೆ. ಅದೇ ರೀತಿ ಇಲ್ಲಿ ಫಿವರ್ ಕ್ಲಿನಿಕ್‌ನ್ನು ಕೂಡ ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಸಾಮಾನ್ಯ ಜ್ವರದ ರೋಗಿಗಳನ್ನು ಕೂಡ ಇಲ್ಲಿ ಸ್ಕೀನಿಂಗ್ ಮಾಡಲಾಗುತ್ತದೆ ಎಂದರು.
ಸದ್ಯ ಈ ಆಸ್ಪತ್ರೆಯಲ್ಲಿರುವ ರೋಗಿಗಳ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಎಪ್ರಿಲ್ 1ರಿಂದ ಈ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವ ಕಾರ್ಯ ನಡೆಸಲಾಗುವುದು ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.