LATEST NEWS
ಉಡುಪಿ – ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ!

ಉಡುಪಿ ಸೆಪ್ಟೆಂಬರ್ 30: ಅಜ್ಜರಕಾಡು ಉದ್ಯಾನವನದ ಹುತಾತ್ಮರ ಸೈನಿಕರ ಸ್ಮಾರಕದ ಹಿಂಭಾಗದಲ್ಲಿರುವ ಮರಕ್ಕೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತನ ವ್ಯಕ್ತಿ ಭೋಜ ನಾಯಕ್ ಎಂಬವರ ಪುತ್ರ ಸಂತೋಷ ಎಚ್.ಬಿ (33) ಎಂದು ಗುರುತಿಸಲಾಗಿದೆ. ಈತ ಶೃಂಗೇರಿಯವನಾಗಿದ್ದು ,ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading