Connect with us

BELTHANGADI

7 ತಿಂಗಳ ಗರ್ಭಿಣಿಯಾದ 10ನೇ ತರಗತಿ ವಿಧ್ಯಾರ್ಥಿನಿ – ಇಬ್ಬರ ಮೇಲೆ ದೂರು ದಾಖಲು

ಬೆಳ್ತಂಗಡಿ ಸೆಪ್ಟೆಂಬರ್ 30: 10ನೇ ತರಗತಿ ಓದುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ 7 ತಿಂಗಳ ಗರ್ಭಿಣಿಯನ್ನಾಗಿಸಿದ ಇಬ್ಬರ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.


ಲಾಕ್ಡೌನ್ ಬಳಿಕ ಶಾಲೆಗೆ ತೆರಳಿದ್ದ ಬಾಲಕಿಯ ವೈದ್ಯಕೀಯ ಪರೀಕ್ಷೆ ಸಂದರ್ಭ ಬಾಲಕಿಯ ದೇಹದಲ್ಲಾದ ಬದಲಾವಣೆ ನೋಡಿ ವೈದ್ಯರು ಪರೀಕ್ಷೆ ನಡೆಸಲು ತಿಳಿಸಿದ್ದಾರೆ. ಈ ಸಂದರ್ಭ ಬಾಲಕಿ 7 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ಹಿನ್ನಲೆ ತನ್ನನ್ನು ಗರ್ಭವತಿಯನ್ನಾಗಿಸಿದ 1) ರವೀಂದ್ರ ಹಾಗೂ 2) ಯೋಗೀಶ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಾಳೆ.


ಆಕೆಯ ದೂರಿನ ಪ್ರಕಾರ ಲಾಕ್ಡೌನ್ ಸಂದರ್ಭ ಮನೆಯ ಹತ್ತಿರ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ರವೀಂದ್ರ ಎಂಬಾತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಆಕೆಯ ಜೊತೆ ಸಲುಗೆಯಿಂದ ವರ್ತಿಸಿದಲ್ಲದೇ ಮನೆಯ ಸುತ್ತಮುತ್ತ ಇರುವ ಪರಿಸದಲ್ಲಿ ಆಕೆಯನ್ನು ಹಲವು ಅತ್ಯಾಚಾರ ಮಾಡಿದ್ದಾನೆ. ಈ ನಡುವೆ ಮತ್ತೊಬ್ಬ ಆರೋಪಿ ಬಾಲಕಿಯ ಸಂಬಂಧಿಯಾದ ಯೋಗೀಶ್ ಸವಣಾಲು ಆಕೆಯನ್ನು ಗ್ರಾಮದ ಕಾಡುಪ್ರದೇಶಕ್ಕೆ ಕರೆದುಕೊಂಡು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಇಬ್ಬರ ವಿರುದ್ದ ದೂರು ದಾಖಲಿಸಿದ್ದಾಳೆ.

ಬಾಲಕಿ ಲಾಕ್ ಡೌನ್ ಮುಗಿದ ನಂತರ ಶಾಲೆಗೆ ತೆರಳಿದ್ದಾಗ ಇಂಜೆಕ್ಷನ್ ಕೊಡಲೆಂದು ಬಂದ ವೈದ್ಯರು ಬಾಲಕಿಯ ದೇಹಸ್ಥಿತಿಯನ್ನು ನೋಡಿ ಆಸ್ಪತ್ರೆಯಲ್ಲಿ ಪರೀಕ್ಷಿಸಲು ತಿಳಿಸಿದ್ದಾರೆ. ನಂತರ ಬಾಲಕಿಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ ಆಕೆ 7 ತಿಂಗಳ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ತನ್ನ ಮೇಲೆ ಬಲಾತ್ಕಾರವಾಗಿ ಅತ್ಯಚಾರ ಎಸಗಿ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದ 1) ರವೀಂದ್ರ ಹಾಗೂ 2) ಯೋಗೀಶ ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ಒದಗಿಸಿಕೊಡಬೇಕಾಗಿ ಬಾಲಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.