LATEST NEWS
ಉಡುಪಿ: ನಿರಾಶ್ರಿತರರಿಗೆ ತಾತ್ಕಾಲಿಕ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ.

ಉಡುಪಿ, ಮೇ.11: ನಗರದ ಬಸ್ಸು ನಿಲ್ದಾಣ ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ನಿರಾಶ್ರಿತರಿಗೆ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಪುರ್ನವಸತಿ ಕೇಂದ್ರ ಬೋರ್ಡ್ ಹೈಸ್ಕೂಲಿನಲ್ಲಿ ಮಂಗಳವಾರ ಆಶ್ರಯ ಒದಗಿಸಲಾಗಿದೆ.
ನಿರಾಶ್ರಿತರು ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ನಗರದಲ್ಲಿ ಸಂಚರಿಸುವುದು, ಗುಂಪು ಸೇರುವುದು, ಕೊರೊನಾ ನಿಯಮಾವಳಿಗಳು ಪಾಲಿಸದಿರುವುದು ಕಂಡುಬಂದಿತ್ತು.

ಈ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು, ನಾಗರಿಕ ಸಮಾಜದ ಸುರಕ್ಷತೆಯ ಉದ್ದೇಶದಿಂದ ನಿರಾಶ್ರಿತರಿಗೆ ತಾತ್ಕಾಲಿಕ ಪುರ್ನವಸತಿ ಕೇಂದ್ರ ಸ್ಥಾಪಿಸಿ ಆಶ್ರಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ವ್ಯಾಟ್ಸಪ್ ಮೂಲಕ ಮನವಿ ಮಾಡಿತ್ತು. ಜಿಲ್ಲಾಡಳಿತವು ತಕ್ಷಣ ಸ್ಪಂದಿಸಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ ಕುಮಾರ್ ಅವರ ಮುಂದಾಳತ್ವದಲ್ಲಿ ಕಾರ್ಯಚರಣೆ ನಡೆಯಿತು.
ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್, ಅವರು ಇಲಾಖೆಗೆ ಸಹಕರಿಸಿದರು.