LATEST NEWS
ಡ್ರಗ್ ಮಾಫಿಯಾ ವಿರುದ್ದ ಉಡುಪಿ ಪೊಲೀಸರ ಸಮರ..ತಾವೇ ಫೀಲ್ಡಿಗಳಿದು ತಪಾಸಣೆಯಲ್ಲಿ ತೊಡಗಿದ ಎಸ್ಪಿ
ಉಡುಪಿ ಸೆಪ್ಟೆಂಬರ್ 15: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದ ಕಾವು ಹೆಚ್ಚಾಗುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಉಡುಪಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕಳೆದ ತಿಂಗಳ ಕಾರ್ಯಾಚರಣೆ ವೇಳೆ ಕೆಜಿ ಗಟ್ಟಲೆ ಗಾಂಜಾ ಪತ್ತೆಯಾದ ಬೆನ್ನಲ್ಲೆ ಉಡುಪಿ ಪೊಲೀಸರು ಈಗ ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು ಜಿಲ್ಲಾ ಗಡಿಯಲ್ಲಿ ಹೆಚ್ಚು ಹೆಚ್ಚು ತಪಾಸಣೆ ಮಾಡುತ್ತಿದ್ದಾರೆ. ವಾಹನಗಳ ತಪಾಸಣೆ ಮಾಡುವ ಜೊತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕೂಡ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಎಸ್ ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ ಖುದ್ದಾಗಿ ಫೀಲ್ಡಿಗೆ ಇಳಿದರು.
ನಿನ್ನೆ ಸಂಜೆ ವೇಳೆಗೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಕರ್ಕಶವಾಗಿ ಶಬ್ದ ಮಾಡುತ್ತಾ ಓಡಾಡುವ ಬುಲೆಟ್ ಗಳಿಗೆ ಫೈನ್ ಹಾಕಿದ್ದಾರೆ. ಕಣ್ಣುಕೋರೈಸುವ ನೀಲಿ ಲೈಟುಗಳು , ಹೆಡ್ಲೈಟ್ ನ ಪಕ್ಕದಲ್ಲಿ ಇತರ ಸವಾರರಿಗೆ ಇರಿಟೇಷನ್ ಮಾಡುವ ನೀಲಿಬಣ್ಣದ ಎಲ್ಇಡಿ ಲೈಟ್ ಗಳನ್ನು ಅಳವಡಿಸಿರುವ ಸವಾರರ ಮೇಲೆ ದಂಡ ಬೀಸಿದ್ದಾರೆ.
ಎರಡು ಗಂಟೆಯಲ್ಲಿ ಸುಮಾರು 70 ಕೇಸುಗಳನ್ನು ದಾಖಲಿಸಿ 40000 ಟ್ರಾಫಿಕ್ ಪೊಲೀಸರು ಫೈನ್ ವಸೂಲಿ ಮಾಡಿದ್ದಾರೆ. ಟ್ರಾಫಿಕ್ ಗಳನ್ನು ಮೋಟಾರು ಕಾಯ್ದೆಗಳನ್ನು ಉಲ್ಲಂಘಿಸಿದ ಸುಮಾರು 25 ಕೇಸುಗಳು ದಾಖಲಾಗಿದ್ದು 15000 ರಷ್ಟು ದಂಡವನ್ನು ಉಡುಪಿ ನಗರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಇನ್ನೆರಡು ದಿನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ರೌವ್ಯ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಎಸ್ ಪಿ ವಿಷ್ಣುವರ್ಧನ್ ಎಚ್ಚರಿಕೆ ನೀಡಿದರು.