LATEST NEWS
ಕೊರೊನಾ ಹೊಡೆತದ ನಡುವೆ ಸಹಜ ಸ್ಥಿತಿಯತ್ತ ಉಡುಪಿ

ಕೊರೊನಾ ಹೊಡೆತದ ನಡುವೆ ಸಹಜ ಸ್ಥಿತಿಯತ್ತ ಉಡುಪಿ
ಉಡುಪಿ ಮೇ.20: ನಿನ್ನೆಯ ಕೊರೊನಾ ಹೊಡೆತದ ನಡುವೆ ಉಡುಪಿಯಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿ ಇದ್ದು, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇದೆ. ಆದರೆ ಖಾಸಗಿ ಬಸ್ ಸಂಚಾರ ಆರಂಭವಾಗದ ಹಿನ್ನಲೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್ ಡೌನ್ 4.0 ದಲ್ಲಿ ರಾಜ್ಯ ಸರಕಾರದ ಸಡಿಲಿಕೆ ನಂತರ ಉಡುಪಿಯಲ್ಲಿ ಸಹಜ ಸ್ಥಿತಿಯತ್ತ ತೆರಳುತ್ತಿದೆ. ಈ ನಡುವೆ ನಿನ್ನೆಯಿಂದ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭವಾದ ಹಿನ್ನಲೆ ಉಡುಪಿಯಿಂದಲೂ ಹೊರ ಜಿಲ್ಲೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಡೆಸುತ್ತಿದೆ.

ಆದರೆ ಖಾಸಗಿ ಬಸ್ ಮಾಲಿಕರು ವಾಹನ ತೆರಿಗೆ ವಿನಾಯಿತಿಗೆ ಬೇಡಿಕೆ ಸಲ್ಲಿಸಿರುವ ಹಿನ್ನಲೆ ಉಡುಪಿಯಲ್ಲೂ ಇಂದು ಕೂಡ ಬಹುತೇಕ ಖಾಸಗಿ ಬಸ್ ರಸ್ತೆಗೆ ಇಳಿದಿಲ್ಲ. ಈ ಹಿನ್ನಲೆ ಅತೀ ಹೆಚ್ಚು ಬೇಡಿಕೆ ಇರೊ ರೂಟ್ ಗಳಿಗೆ ಸರಕಾರಿ ಬಸ್ ಸಂಚಾರ ಆರಂಭಿಸಲಾಗಿದೆ.
ಆದರೆ ಖಾಸಗಿ ಬಸ್ ಸಂಚಾರ ಆರಂಭವಾಗದೆ ಹಿನ್ನಲೆ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದು, ಬೇರೆ ಬೇರೆ ಊರುಗಳಿಗೆ ತೆರಳುವುದಕ್ಕೆ ಸರ್ಕಾರಿ ಬಸ್ ಗೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.