LATEST NEWS
ಇದು ಮರಣ ಜೋಕ್ ಅಲ್ಲ ದಯವಿಟ್ಟು ಸತ್ತವರ ಬಗ್ಗೆ ಏನೇನೋ ಅಪಪ್ರಚಾರ ಮಾಡಬೇಡಿ….!!

ಉಡುಪಿ ನವೆಂಬರ್ 14: ‘ಉಡುಪಿ ನೇಜಾರು ಹತ್ಯಾಕಾಂಡ ಬಗ್ಗೆ ಕಪೋ ಕಲ್ಪಿತ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಬೇಡಿ, ಮೃತ ಜೀವಗಳಿಗೆ ಗೌರವ ತೋರಿಸಿ ಎಂದು ಕೊಲೆಯಾದ ಕುಟುಂಬಸ್ಥರು ಮಾದ್ಯಮಗಳಿಗೆ ಮನವಿ ಮಾಡಿದ್ದಾರೆ.
ಸುಳ್ಳು ಸುದ್ದಿ ಹಾಕಿದವರ ಮೇಲೆ ಕೇಸ್ ಹಾಕಬೇಕು.ಇದು ಮರಣ ಜೋಕ್ ಅಲ್ಲ ದಯವಿಟ್ಟು ಸತ್ತವರ ಬಗ್ಗೆ ಏನೇನೋ ಅಪಪ್ರಚಾರ ಮಾಡಬೇಡಿ ಆದಷ್ಟು ಶೀಘ್ರವಾಗಿ ನ್ಯಾಯ ಸಿಗಬೇಕು,ನಮಗೆ ಉಸಿರು ಕಟ್ಟಿದಂತಾಗಿದೆ ಜೊತೆಗೆ ಎಲ್ಲಾ ಮಹಿಳೆಯರಿಗೂ ಅಭದ್ರತೆ ಕಾಡುತ್ತಿದೆ, ನ್ಯಾಯ ಸಿಕ್ಕಿದ ನಂತರವೇ ನಾವು ಫ್ರೀ ಆಗುತ್ತೇವೆ.ಮಹಿಳೆಯರಿಗೆ ಭದ್ರತೆ ಬೇಕು. ಸಾಕ್ಷಿಗಳಿಗೆ, ಆಸುಪಾಸಿನ ಜನರಿಗೆ ಘಟನೆಯ ಬಳಿಕ ಭಯ ಇದೆ ಅಂದ್ರೆ ಪೊಲೀಸರಿಂದ ನಮಗೆ ಭದ್ರತೆ ಬೇಕು. ಹಾಡುಹಗಲೇ ಹಂತಕ ಬಂದು ಕೊಂದು ಹೋಗಿದ್ದಾನೆ.

ಇದೇ ಮೊದಲು ಇದೇ ಕೊನೆಯಾಗಬೇಕು. ಇಡೀ ಕರ್ನಾಟಕ, ದೇಶದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ವಿಶೇಷ ಭದ್ರತೆ ಇರಬೇಕು . ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ನಮಗೆ ಹೆಲ್ಪ್ ಲೈನ್ ಮಾಡಿಕೊಡಬೇಕೆಂದು ಸಂಬಂಧಿ ತಸ್ದೀನ್ ಮತ್ತು ಫಾತಿಮಾ ಅಸ್ಬಾ ಮನವಿ ಮಾಡಿದ್ದಾರೆ.