KARNATAKA
ಉಡುಪಿ ನೇಜಾರು ಹತ್ಯಾಕಾಂಡ : ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ..!
ಉಡುಪಿ : ಉಡುಪಿ ನೇಜಾರು ಹತ್ಯಾಕಾಂಡದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ಅವರು, ಮಲ್ಪೆಯ ನಾಲ್ಕು ಮಂದಿ ಕೊಲೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಪ್ರವೀಣ್ ಚೌಗಲೇ ಎಂಬಾತನನ್ನು ನ.15 ರಂದು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಲಾಗಿದ್ದು, ಎಲ್ಲಾ ಸಾಕ್ಷಿಗಳು ಹಾಗೂ ಎಫ್‍ಎಸ್‍ಎಲ್ ವರದಿಗಳು ಬಂದಿದೆ. ಈ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ವಿಶೇಷ ಸರಕಾರಿ ಅಭಿಯೋಜಕರ ಸಲಹೆ ಪಡೆದು ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ದೋಷಾರೋಪಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಆದಷ್ಟು ಬೇಗ ಆರಂಭಿಸಿಲು ಮನವಿ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ ಎಂದಿದ್ದಾರೆ.
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ 2023 ರ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ದಾರುಣ ಘಟನೆ ನಡೆದಿತ್ತು. ಬಳಿಕ ಆರೋಪಿ ಪ್ರವೀಣ್ ಚೌಗುಲೆ ಹತ್ಯೆ ಮಾಡಿ ಪರಾರಿಯಾಗಿದ್ದ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ರೋಪಿ ಪ್ರವೀಣ್ ಅರುಣ್ ಚೌಗಲೆ ಮತ್ತು ಅಯ್ನಾಝ್ ಕಳೆದ 8 ತಿಂಗಳಿನಿಂದ ಪರಿಚಯಸ್ಥರಾಗಿದ್ದು, ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8-10 ಬಾರಿ ವಿದೇಶಕ್ಕೆ ತೆರಳುವ ವಿಮಾನದಲ್ಲಿ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಅವಕಾಶವು ದೊರಕಿತ್ತು. ಹೀಗೆ ಅವರಿಬ್ಬರ ನಡುವೆ ಗೆಳೆತನವು ಬೆಳೆದಿತ್ತು. ಇದನ್ನೂ ಓದಿ: ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್: ಒಬ್ಬಳ ಮೇಲಿನ ದ್ವೇಷ ನಾಲ್ವರನ್ನ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್ ಆಕೆಗೆ ಓಡಾಟ ನಡೆಸಲು ಸಹಾಯವಾಗಲೆಂದು ಆರೋಪಿ ತನ್ನ ದ್ವಿಚಕ್ರ ವಾಹನವನ್ನು ಆಕೆಯ ಬಳಕೆಗೆ ನೀಡಿದ್ದನು. ಇತ್ತೀಚೆಗೆ ತಿಂಗಳ ಹಿಂದೆ, ಅಯ್ನಝ್ ಆರೋಪಿಯ ಜೊತೆಗಿನ ಒಡನಾಟದಿಂದ ದೂರ ಸರಿದು, ಮಾತನಾಡುತ್ತಿರಲಿಲ್ಲ. ಇದರಿಂದ ಪ್ರವೀಣ್ ತೀವ್ರ ವಿಚಲಿತನಾಗಿ ಸಿಟ್ಟಿಗೆದ್ದಿದ್ದನು. ತನ್ನ ಜೊತೆಗಿನ ಒಡನಾಟದಿಂದ ದೂರ ಸರಿದ ಅಯ್ನಾಝ್ಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮನೆಗೆ ಆ್ಯಪ್ನ ಸಹಾಯದಿಂದ ಆಗಮಿಸಿದ ಆರೋಪಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಅದೇ ವೇಳೆ ತಡೆಯಲು ಬಂದ ಆಕೆಯ ತಾಯಿ ಹಸೀನಾ, ಸಹೋದರಿ ಅಫ್ನಾನ್, ಮನೆಯ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಯ ಒಳಗೆ ಬರುತ್ತಿದ್ದ ವೇಳೆ ಆತನಿಗೂ ಚೂರಿ ಇರಿದಿದ್ದ.