Connect with us

KARNATAKA

ನೇಜಾರು ಹತ್ಯಾಕಾಂಡದ ಹಂತಕ ಸುಪಾರಿ ಕಿಲ್ಲರ್‌,ಒಂದೆರಡು ದಿನದಲ್ಲಿ ಆರೋಪಿಗಳ ಬಂಧಿಸುವ ಭರವಸೆ ನೀಡಿದ ಗೃಹ ಸಚಿವ..!

ಹತ್ಯಾಕಾಂಡದ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರವಾಣಿ ಮೂಲಕ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಮನೆ ಯಜಮಾನ ನೂರ್ ಮುಹಮ್ಮದ್ ಜೊತೆ ಮಂಗಳವಾರ ದೂರವಾಣಿ ಕರೆ ಮಾಡಿ ಮಾತನಾಡಿದರು.

ಉಡುಪಿ: ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದ ಉಡುಪಿ ನೇಜಾರು ಹತ್ಯಾಕಾಂಡದ ಹಿಂದೆ ಹಣಕಾಸು ವ್ಯವಹಾರದ ಹಿನ್ನೆಲೆ ಇದೆ ಎನ್ನುವ ಅನುಮಾನ ಬಲವಾಗಿ ಕೇಳಿಬರುತ್ತಿದೆ. ಇದಕ್ಕಾಗಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹಂತಕ ಸುಪಾರಿ ಕಿಲ್ಲರ್‌ ಎನ್ನುವ ಅನುಮಾನವೂ ವ್ಯಕ್ತವಾಗಿದೆ.

 

ಪೊಲೀಸರು ಈ ದಿಕ್ಕಿನಲ್ಲೂ ತನಿಖೆ ನಡೆಸುತ್ತಿದ್ದಾರೆ. ನಾಲ್ವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಿರುವುದನ್ನು ನೋಡಿದರೆ, ಕೊಲೆಗಾರ ಸುಪಾರಿ ಕಿಲ್ಲರ್‌ ಎಂಬ ಅನುಮಾನ ದಟ್ಟವಾಗಿದೆ ಆದ್ರೆ ಸುಪಾರಿ ಕೊಟ್ಟವರು ಯಾರು ? ಈ ಹಿನ್ನೆಲೆಯಲ್ಲಿ ನಾನಾ ದಿಕ್ಕುಗಳಲ್ಲಿ ತನಿಖೆ ಆರಂಭವಾಗಿದೆ. ಇದಕ್ಕಾಗಿ 5 ಪೊಲೀಸ್ ತಂಡಗಳು ಕಾರ್ಯಪ್ರವರ್ತರಾಗಿದ್ದು ಆರೋಪಿಯ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂತ್ರಸ್ಥ ಕುಟುಂಬಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಾಂತ್ವಾನ:
ಇನ್ನು ಹತ್ಯಾಕಾಂಡದ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರವಾಣಿ ಮೂಲಕ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಮನೆ ಯಜಮಾನ ನೂರ್ ಮುಹಮ್ಮದ್ ಜೊತೆ ಮಂಗಳವಾರ ದೂರವಾಣಿ ಕರೆ ಮಾಡಿ ಮಾತನಾಡಿದರು. ‘ನೀವು ನಮಗೆ ಕರೆ ಮಾಡಿ ಸಾಂತ್ವಾನ ಹಾಗೂ ಭರವಸೆ ನೀಡಿದಕ್ಕೆ ನಿಮಗೆ ಕೃತಜ್ಞತೆಗಳು. ಈ ಪ್ರಕರಣವನ್ನು ಅತೀ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ನೂರ್ ಮುಹಮ್ಮದ್ ಗೃಹ ಸಚಿವರಲ್ಲಿ ಮನವಿ ಮಾಡಿದರು. ಈ ಕೃತ್ಯದಿಂದ ನಮ್ಮ ಸುತ್ತಮುತ್ತಲಿನ ಊರಿನ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಇಲ್ಲಿಯ ಜನ ನಿನ್ನೆ ದೀಪಾವಳಿ ಕೂಡ ಆಚರಣೆ ಮಾಡದೆ ನಮ್ಮ ನೋವಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದುದರಿಂದ ಆದಷ್ಟು ಬೇಗ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವರು, ನಾವು ಈಗಾಗಲೇ ತನಿಖೆ ಪ್ರಾರಂಭಿಸಿದ್ದೇವೆ. ಈ ಸಂಬಂಧ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಒಂದೆರಡು ದಿನಗಳ ಒಳಗೆ ನಾವು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *