Connect with us

    KARNATAKA

    ಉಡುಪಿ : ಕೇಂದ್ರ ಸಚಿವ  ಅಶ್ವಿನಿ ವೈಷ್ಣವ್‌ ರನ್ನು ಸಂಸದ ಕೋಟ ಭೇಟಿ, ಕೊಂಕಣ್ ವಿಭಾಗ ವಿಲೀನ, ಮತ್ಸ್ಯಗಂಧಾ ರೈಲು ಬೋಗಿ ಬದಲಾವಣೆಗೆ ಮನವಿ

    ಉಡುಪಿ :  ಕೇಂದ್ರ ಸಚಿವ  ಅಶ್ವಿನಿ ವೈಷ್ಣವ್‌ ರನ್ನು ಭೇಟಿಯಾದ ಸಂಸದ ಕೋಟ  ಶ್ರೀನಿವಾಸ್ ಪೂಜಾರಿ ಕೊಂಕಣ್ ವಿಭಾಗ ವಿಲೀನ, ಮತ್ಸ್ಯಗಂಧಾ ರೈಲು ಬೋಗಿ ಬದಲಾವಣೆಗೆ ಮನವಿ ಸಲ್ಲಿಸಿದರು.


    ಕರಾವಳಿ ಮಲೆನಾಡಿನ ರೈಲ್ವೆ ಇಲಾಖೆಯ ಸುಧಾರಿಕೆಗೆ ಭಗೀರಥ ಪ್ರಯತ್ನ ಪಡುತ್ತಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಇದೀಗ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಅಶ್ವಿನಿ ವೈಷ್ಣವ್‌ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಇಂದು ಪ್ರಮುಖ ನಾಲ್ಕು ವಿಚಾರವನ್ನು ಇಟ್ಟುಕೊಂಡು ಭಾರತ ಸರ್ಕಾರದ ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ್‌ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂಸದ ಕೋಟ ಈಗಿನ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತುಪಡಿಸಿ ತಡರಾತ್ರಿ ಉಡುಪಿ ಕುಂದಾಪುರ ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸ ಬೆಂಗಳೂರು ಕಾರವಾರ ನಡುವೆ ರೈಲಿಗೆ ಮನವಿ ಮಾಡಿದರು.

    ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ ಕೊಟ್ಟ ಮನವಿಗೆ ಸಚಿವರು ಒಪ್ಪಿಕೊಂಡರು.
    ಮತ್ಸ್ಯಗಂದಾ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐಸಿಎಪ್ ಮಾದರಿಯದಾಗಿದ್ದು ತಕ್ಷಣವೇ ಅದನ್ನು ಆಧುನಿಕLHB ಕೋಚಿಗೆ ಮೇಲ್ದರ್ಜೆಗೆ ಏರಿಸಲು ಕೋರಲಾಯಿತು. ಸ್ಪಂದಿಸಿದ ಸಚಿವರು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ಸಂಸದ ಕೋಟ ತಿಳಿಸಿದ್ದಾರೆ.
    ಮುಖ್ಯವಾಗಿ ಬಹುದಿನದ ಬೇಡಿಕೆಯಾದ ಕೊಂಕಣ್ ರೈಲ್ವೆ ಯನ್ನು ಭಾರತದ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂಬ ಮನವಿ ಮಾಡಿದ್ದು ಈ ಬಗ್ಗೆ ತಾನು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಬ್ಬರು ಹಿಂದೆ ರೈಲ್ವೆ ಸಚಿವರಿಗೆ ಕೊಟ್ಟ ಮನವಿಯನ್ನು ನೆನಪಿಸಿದರು. ರೈಲ್ವೆ ಸಚಿವರಿಗೆ ಕರ್ನಾಟಕ, ಮಹಾರಾಷ್ಟ್ರ ಗೋವಾ ರಾಜ್ಯಗಳ ಷೇರು ಗಳು ಇರೋದನ್ನು ಮತ್ತು ಎಲ್ಲಾ ಸರಕಾರದ ಸಂಪರ್ಕ ಮತ್ತು ಸಹ ಮತವನ್ನು ವಿವರಿಸಿದ್ದಾರೆ. ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾದರೆ ಮಾತ್ರ ಈಗಿರುವ ರೈಲ್ವೇ ಹಳಿಗಳ ಮೇಲ್ದರ್ಜೆ ಮತ್ತು ಹೆಚ್ಚುವರಿ ಭೋಗಿಗಳ ಜೋಡಣೆ ಹಾಗೂ ಈಗ ಇರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಸೇರಿಸಲಾವಕಾಶ ಮತ್ತು ಹೊಸ ರೈಲು ಬೇಡಿಕೆಗಳ ಬಗ್ಗೆ ವಿವರಿಸಿದರು.
    ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಈ ಎಲ್ಲಾ ವಿಚಾರಗಳಿಗೆ ಸಹ ಮತ ವ್ಯಕ್ತಪಡಿಸಿ ಕೊಂಕಣ್ ರೈಲ್ವೆ ವಿಲೀನದ ಬಗ್ಗೆ ಕೂಡಲೇ ರಾಜ್ಯ ಸರ್ಕಾರದಿಂದ ವರದಿ ತರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಸಂತಸ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply