Connect with us

    UDUPI

    ನಗರ ಕೇಂದ್ರ ಗ್ರಂಥಾಲಯದಲ್ಲಿ ಓದುಗರಿಗೆ ಉತ್ತಮ ಸೇವೆ: ಸುಮಿತ್ರಾ ಆರ್ ನಾಯಕ್

    ಉಡುಪಿ, ಮಾರ್ಚ್ 05 : ಪ್ರತಿದಿನ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಉಡುಪಿ ಜಿಲ್ಲೆಯ ನಾಗರೀಕರು ಮತ್ತು ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು, ಉಡುಪಿ ನಗರ ಕೇಂದ್ರ ಗ್ರಂಥಾಲಯವು ಸಾರ್ವಜನಿಕ ಓದುಗರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದು ಉಡುಪಿ ನಗರಸಭೆ ಆಧ್ಯಕ್ಷೆ  ಸುಮಿತ್ರಾ ನಾಯಕ್ ಹೇಳಿದರು.

    ಉಡುಪಿ ನಗರ ಕೇಂದ್ರ ಗ್ರಂಥಾಲಯಕ್ಕೆ ಉಪಯೋಗವಾಗುವಂತೆ, ಪುಸ್ತಕಗಳನ್ನು ಇಡುವ ಡಬಲ್ ರಾಕ್ ವ್ಯೆಯಕ್ತಿಕವಾಗಿ ಕೊಡುಗೆ ನೀಡಿ ಮಾತನಾಡಿದರು. ನಗರಸಭಾ ಸದಸ್ಯೆ ರಶ್ಮಿಚಿತ್ತರಂಜನ್ ಭಟ್, ಮಕ್ಕಳಿಗಾಗಿ 50 ಹೊಸ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

    ಕಾರ್ಯಕ್ರಮದಲ್ಲಿ ಡಿಜಿಟಲ್ ಗ್ರಂಥಾಲಯ ಪಿತಾಮಹ ಡಾ: ಸತೀಶ್ ಕುಮಾರ್ ಹೊಸಮನಿ ಮಾತನಾಡಿ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಈ ರೀತಿ ಗ್ರಂಥಾಲಯಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಇತರರಿಗೆ ಮಾದರಿ ಎಂದರು. ಇಲ್ಲಿನ ಜನತೆ ಸುಸಂಸ್ಕೃತರು ಮತ್ತು ಪ್ರಜ್ಞಾವಂತರು. ಪುಸ್ತಕಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಪುಸ್ತಕ ಸಂಸ್ಕೃತಿ ಬೆಳೆಸಲು ಇಂತಹ ಅತ್ಯುತ್ತಮ ಪೀಠೋಪಕರಣ, ಪುಸ್ತಕಗಳನ್ನು ಕೊಡುಗೆ ನೀಡುವುದರ ಮೂಲಕ ಗ್ರಂಥಾಲಯದ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply