LATEST NEWS
ಸೂರ್ಯ ಗ್ರಹಣವಿದ್ದರೂ ಎಂದಿನಂತೆ ಉಡುಪಿ ಶ್ರೀಕೃಷ್ಣ ಮಠ ಕೊಲ್ಲೂರು ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನ
ಸೂರ್ಯ ಗ್ರಹಣವಿದ್ದರೂ ಎಂದಿನಂತೆ ಉಡುಪಿ ಶ್ರೀಕೃಷ್ಣ ಮಠ ಕೊಲ್ಲೂರು ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನ
ಉಡುಪಿ ಡಿಸೆಂಬರ್ 25: ನಾಳೆ ನಡೆಯುವ ಕಂಕಣ ಸೂರ್ಯ ಗ್ರಹಣ ಕಾಲದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಎಂದಿನಂತೆ ಭಕ್ತರಿಗೆ ತೆರೆದಿರುತ್ತದೆ. ಗ್ರಹಣ ಕಾಲದಲ್ಲಿ ದೇವಸ್ಥಾನ ಮುಚ್ಚುವುದಿಲ್ಲ ಎಂದು ಕೊಲ್ಲೂರು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ನಾಳೆ ಬೆಳಿಗ್ಗೆ 8ಗಂಟೆ 3ನಿಮಿಷದಿಂದ 11ಗಂಟೆ 4ನಿಮಿಷದವರೆಗೆ ಈ ಗ್ರಹಣ ಗೋಚರಿಸಲಿದ್ದು, ಬೆಳಿಗ್ಗೆ 9.24ಕ್ಕೆಸ್ಪಷ್ಟವಾಗಿ ಗ್ರಹಣ ಗೋಚರಿಸಲಿದೆ. ಕರಾವಳಿಯ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ಕಾಲದಲ್ಲಿ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಆದರೆ ಉಡುಪಿಯ ಕೃಷ್ಣ ಮಠ ಹಾಗೂ ಕೊಲ್ಲೂರು ದೇವಾಲಯದಲ್ಲಿ ಭಕ್ತರಿಗೆ ಎಂದಿನಂತೆ ದೇವಸ್ಥಾನ ತೆರೆದಿರುತ್ತದೆ.
ಉಡುಪಿಯಲ್ಲಿ ಬೆಳಗ್ಗೆ 4.30 ಕ್ಕೆ ಕೃಷ್ಣನಿಗೆ ನಿರ್ಮಾಲ್ಯ ಪೂಜೆ, ಎಲ್ಲಾ ಅಲಂಕಾರ ತಗೆಯುತ್ತಾರೆ. 11 ರ ವರೆಗೆ ನಿರ್ಜಲ, ನಿರಾಹಾರ ,ಉಪವಾಸ, ಕೃಷ್ಣಮಠದಲ್ಲಿ ಗ್ರಹಣ ಮೋಕ್ಷ ನಂತರ ದೈನಂದಿನ 16 ವಿಧದ ಪೂಜೆ ನಡೆಯಲಿದೆ. ವಿಷ್ಣು ಸಹಸ್ರನಾಮ ಪಾರಾಯಣ, ನವಗ್ರಹ ಜಪ ಹೋಮ ನಡೆಯಲಿದೆ. ಬೆಳಗ್ಗೆ 11 ರ ನಂತರ ಕೃಷ್ಣಮಠದಲ್ಲಿ ಅಡುಗೆ ಮಾಡಿ ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಗುವುದು.
ಕೊಲ್ಲೂರಿನಲ್ಲೂ ಕೂಡ ಗ್ರಹಣದ ವೇಳೆ ದೇವಸ್ಥಾನ ಮುಚ್ಚುವುದಿಲ್ಲ. ಗ್ರಹಣ ಆರಂಭ ಮೊದಲು ಮೂಕಾಂಬಿಕೆಗೆ ಬೆಳಗ್ಗಿನ ಪೂಜೆಯನ್ನು ಮುಗಿಸಲಾಗುತ್ತದೆ. ಅನಾದಿಕಾಲದಿಂದಲೂ ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಹಾ ಮಹಾ ಮಂಗಳಾರತಿ ಈ ಬಾರಿಯೂ ನಡೆಯಲಿದೆ. ಗ್ರಹಣವಾದ ನಂತರ ಮಧ್ಯಾಹ್ನದ ಪೂಜೆ ನಡೆಯಲಿದೆ. ಗ್ರಹಣದ ದಿನ ಕೊಲ್ಲೂರಿನಲ್ಲಿ ಮಧ್ಯಾಹ್ನ ಊಟ ಇಲ್ಲ, ಫಲಾಹಾರ ವ್ಯವಸ್ಥೆ ಮಾತ್ರ ಮತ್ತೆ ರಾತ್ರಿ ಎಂದಿನಂತೆ ಊಟವಿದೆ.