LATEST NEWS
ಶ್ರೀಕೃಷ್ಣ ಮಠದಲ್ಲಿ ಯಾವುದೇ ಭದ್ರತಾ ಲೋಪ ಇಲ್ಲ – ಪಲಿಮಾರು ಮಠ
ಶ್ರೀಕೃಷ್ಣ ಮಠದಲ್ಲಿ ಯಾವುದೇ ಭದ್ರತಾ ಲೋಪ ಇಲ್ಲ – ಪಲಿಮಾರು ಮಠ
ಉಡುಪಿ ಮೇ 2: ಶ್ರೀಕೃಷ್ಣಮಠದಲ್ಲಿ ಭದ್ರತಾಲೋಪ ಇದ್ದದರಿಂದ ಪ್ರಧಾನಿ ನರೇಂದ್ರ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪಲಿಮಾರ ಮಠ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಲಿಮಾರು ಮಠದ ಮ್ಯಾನೆಜರ್ ವೆಂಕಟರಮಣಾಚಾರ್ಯ ಕೃಷ್ಣಮಠದಲ್ಲಿ ಯಾವುದೇ ಭದ್ರತಾಲೋಪ ಇಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಅವರು ಮಠಕ್ಕೆ ಭೇಟಿ ನೀಡುವುದಿಲ್ಲ ಎಂದು ಮೊದಲೇ ನಿರ್ಧಾರ ಆಗಿತ್ತು ಇದಕ್ಕೆ ಬೇರೆ ಬಣ್ಣ ಕೊಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅನಿರೀಕ್ಷಿತವಾಗಿ ಬಂದರೆ ಎಲ್ಲಾ ತಯಾರಿ ಮಾಡಿಕೊಂಡಿದ್ದೆವು, ಅಲ್ಲದೆ ಪೊಲೀಸರು ಎಲ್ಲಾ ರೀತಿಯಲ್ಲಿ ಸನ್ನದ್ದರಾಗಿದ್ರು, ಹತ್ತು ಗಂಟೆಯೊಳಗೆ ಪೂಜಾ ಕಾರ್ಯಗಳನ್ನು ಮುಗಿಸಿ ಪ್ರಧಾನಿ ಆಗಮನಕ್ಕೆ ಕಾಯುತ್ತಿದ್ದೆವು ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕೆ ಬಂದಾಗ ಮಠಕ್ಕೆ ಬರೋದು ಸರಿಯಲ್ಲ ಎನ್ನುವುದು ಪ್ರಧಾನಿಗಳ ಭಾವನೆಯಾಗಿರಬಹುದು, ಅಲ್ಲದೆ ಇನ್ನೊಮ್ಮೆ ಮಠಕ್ಕೆ ಬರೋದಾಗಿ ಕೂಡ ತಿಳಿಸಿದ್ದಾರೆ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಎನೂ ಹೇಳಲ್ಲ ಎಂದ ಅವರು, ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ನಮಗೆ ಗೊತ್ತಿಲ್ಲ ಎಂದರು.