LATEST NEWS
ಪ್ರಮೋದ್ ಮುತಾಲಿಕ್ ಉಡುಪಿ ಪ್ರವೇಶಕ್ಕೆ ನಿರ್ಬಂಧ ಹೇರಿರುವವರನ್ನು ಕೊರಗಜ್ಜ ಶಿಕ್ಷಿಸಲಿ….!!
ಉಡುಪಿ: ಕಾನೂನು ಸುವ್ಯವಸ್ಥೆ ಹಿನ್ನಲೆ ಗಂಗೊಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು, ಇದೀಗ ಉಡುಪಿ ಜಿಲ್ಲಾ ಪ್ರವೇಶ ನಿರ್ಬಂಧಕ್ಕೆ ಕಾರಣರಾದವರ ವಿರುದ್ಧ ಕೊರಗಜ್ಜನಿಗೆ ಹಿಂದೂ ಕಾರ್ಯಕರ್ತರು ದೂರು ನೀಡಿದ ಪ್ರಸಂಗ ನಡೆದಿದೆ.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸುಮಾರು ಏಳು ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಕುಂದಾಪುರ ತಾಲೂಕು ಮುಳ್ಳಿಕಟ್ಟೆ ಕೊರಗಜ್ಜನ ಮೊರೆಹೋಗಿದ್ದಾರೆ. ಹಿಂದೂ ಜಾಗರಣ ವೇದಿಕೆಯಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸಬೇಕಿದ್ದರು. ಆದರೆ ಸರ್ಕಾರ ಮುತಾಲಿಕ್ ಜಿಲ್ಲೆಗೆ ಬರದಂತೆ ನಿಷೇಧಾಜ್ಞೆ ಹೊರಡಿಸಿತ್ತು. ಅಲ್ಲದೆ ಮುತಾಲಿಕ್ ಬಂದರೆ ಶಾಂತಿ ಕದಡುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು.
ಆ ಬಳಿಕ ಮುತಾಲಿಕ್ ಆಗಮನಕ್ಕೆ ತಡೆ ಒಡ್ಡಿದವರ ವಿರುದ್ಧ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಹೊರಹಾಕಿದ್ದರು. ಮುತಾಲಿಕ್ ನಿಷೇಧದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಅವರನ್ನು ಕೊರಗಜ್ಜನೇ ಶಿಕ್ಷಿಸಲಿ ಎಂದು ಕಾರ್ಯಕರ್ತರು ಹೇಳಿದ್ದಾರೆ.