LATEST NEWS
ಉಡುಪಿ ಮೂಲದ ಗುತ್ತಿಗೆದಾರ ಡಿಕೆಶಿ ಆಪ್ತನ ಯುಬಿ ಶೆಟ್ಟಿ ಮನೆ ಮೇಲೆ ಐಟಿ ದಾಳಿ

ಉಡುಪಿ ಅಕ್ಟೋಬರ್ 28: ಧಾರವಾಡದ ಉದ್ಯಮಿ ಹಾಗೂ ಗುತ್ತಿಗೆದಾರರಾದ ಉಡುಪಿ ಮೂಲದ ಯುಬಿ ಶೆಟ್ಟಿಯ ಮನೆ ಮೇಲೆ ಗೋವಾ ಮೂಲದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಉಪ್ಪುಂದ ಮೂಲದ ಯೂಬಿ ಶೆಟ್ಟಿ ಅವರ ಉಪ್ಪುಂದದ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿನೆ ನಡೆಸುತ್ತಿದ್ದಾರೆ. ಒಟ್ಟು 9 ಮಂದಿ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಹುಟ್ಟು ಶ್ರೀಮಂತರಾಗಿರುವ ಯುಬಿ ಶೆಟ್ಟಿ, ಬೈಂದೂರು ತಾಲೂಕಿನಲ್ಲಿ ಕಳೆದ ವರ್ಷ ಎರಡು ಶಾಲೆ ಖರೀದಿ ಮಾಡಿದ್ದಾರೆ. ಹೆಚ್ ಎಮ್ ಎಮ್ ಎಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಜೊತೆಗೆ ಒಂದು ಶಾಲೆ ದತ್ತು ಪಡೆದಿದ್ದು, ಗುತ್ತಿಗೆ ವ್ಯವಹಾರದ ಜೊತೆ ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಉಪ್ಪುಂದದಲ್ಲಿ ಹೊಡ್ಡ ಬಂಗಲೆ ಹೊಂದಿರುವ ಯುಬಿ ಶೆಟ್ಟಿ, ತಂದೆ ತಾಯಿ ನಿಧನದ ಬಳಿಕ ಪತ್ನಿ ಕೂಡ ಅಪಘಾತದಲ್ಲಿ ದುರ್ಮರಣ, ಶೆಟ್ಟಿ ಅವರ ಸಹೋದರರು ಅಪರೂಪಕ್ಕೊಮ್ಮೆ ಉಪ್ಪುಂದದ ಮನೆಯಲ್ಲಿ ವಾಸ್ತವ್ಯ ಇರುತ್ತಿದ್ದರು. ಈ ದಾಳಿ ಇದೀಗ ರಾಜಕೀಯಕ್ಕೆ ತಿರುಗಿದ್ದು, ಹಾನಗಲ್ ಉಪಚುನಾವಣೆ ಹಿನ್ನೆಲೆ ಡಿಕೆಶಿಗೆ ಇರಸು ಮುರುಸು ಮಾಡಲು ಈ ಐಟಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಮುಖಂಡ ಹಾಗೂ ಡಿಕೆಶಿ ಆಪ್ತರಾದ ರಾಬರ್ಟ್ ದದ್ದಾಪೂರಿ ಹಾನಗಲ್ ಉಪಚುನಾವಣೆಯಲ್ಲಿ ಯುಬಿ ಶೆಟ್ಟಿ ಭಾಗವಹಿಸಿಲ್ಲ ಎಂದಿದ್ದಾರೆ. ಅಲ್ಲದೇ ಯುಬಿ ಶೆಟ್ಟಿ ಅವರು ಉಡುಪಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ್ದಾರೆ. ಹೀಗಾಗಿ ಅವರ ಮೇಲೆ ಐಟಿ ದಾಳಿ ನಡೆದಿರಬಹುದು ಎಂದು ಹೇಳಿದ್ದಾರೆ