LATEST NEWS
ಉಡುಪಿ – ಲಕ್ಷಾಂತರ ಮೌಲ್ಯ ಬೆಲೆ ಬಾಳುವ ಚಿನ್ನಾಭರಣ ಕದ್ದ ಹೋಮ್ ನರ್ಸ್ ಅರೆಸ್ಟ್
ಉಡುಪಿ ನವೆಂಬರ್ 21: ತಾನು ಹೋಮ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮನೆಯೊಂದರಿಂದ 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಹೋಮ್ ನರ್ಸ್ ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಿದ್ದಪ್ಪ ಕೆ. ಕೊಡ್ಲಿ(23) ಎಂದು ಗುರುತಿಸಲಾಗಿದೆ. ಪ್ರಸಾದ ಎಸ್. ಎಸ್ ಎನ್ನುವವರ ಮನೆಯಲ್ಲಿ ಆರೋಪಿ ಹೋಂ ನರ್ಸ ಆಗಿ ಕೆಲಸ ಮಾಡಿಕೊಂಡಿದ್ದ ನವೆಂಬರ್ 17 ರಂದು ಅವರ ಮನೆಯ ಹಾಲ್ ನ ಗಾಜಿನ ಬೀರುವಿನಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇರಿಸಿದ್ದ ಗ್ರಾಡ್ರೇಜ್ ನ ಲಾಕರ್ ನಲ್ಲಿ ಇರಿಸಿದ್ದ ಸುಮಾರು 427 ಗ್ರಾಂ ತೂಕದ ರೂ: 31,17,100 ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪಿ.ಐ, ರಾಮಚಂದ್ರ ನಾಯಕ್ ಮತ್ತವರ ತಂಡ ನವೆಂಬರ್ 19 ರಂದು ಆರೋಪಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಿದ್ದಪ್ಪ ಕೆ. ಕೊಡ್ಲಿ(23)ನನ್ನು ದಸ್ತಗಿರಿ ಮಾಡಿ, ಕಳವು ಮಾಡಿ ಅಡಗಿಸಿಟ್ಟಿದ್ದ ಸ್ಥಳದಿಂದ ಅಂದಾಜು ರೂ: 30,00,000 ಮೌಲ್ಯದ 374.45 ಗ್ರಾಮ್ಸ್ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.