UDUPI
ಉಡುಪಿ : ಓವರ್ ಟೇಕ್ ತಗಾದೆ, ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ..!

ಉಡುಪಿ : ತಡೆರಹಿತ ಬಸ್ ಚಾಲಕ ತನ್ನ ಕಾರನ್ನು ಓವರ್ ಟೇಕ್ ಮಾಡಿದ್ದರ ವಿರುದ್ಧ ಕೆಂಡವಾದ ಖಾಸಗಿ ಕಾರಿನ ವ್ಯಕ್ತಿಯೋರ್ವ ಸೋಮವಾರ ಬೆಳಿಗ್ಗೆ ಬಸ್ ಚಾಲಕನ ಮೇಲೆ ಬಸ್ಸಿನೊಳಗೆ ಹಲ್ಲೆ ನಡೆಸಿದ ಘಟನೆಯು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ.
ಮೂಲ್ಕಿಯ ಇಸ್ಮಾಯಿಲ್ ಅತೀಕ್ (41) ಆರೋಪಿಯಾಗಿದ್ದು, ಬಸ್ ಚಾಲಕನನ್ನು ಶೈಲೇಂದ್ರ ಯಾನೆ ಶೈಲು ಎಂದು ಗುರುತಿಸಲಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತಾದ ಪ್ರಕರಣವು ದಾಖಲಾಗಿದೆ. ಈ ವೇಳೆ ಬಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ವಿರುದ್ಧವೂ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ.

Continue Reading