LATEST NEWS
ಉಡುಪಿ ಹಿಜಬ್ ಹೋರಾಟದ ಆರು ವಿಧ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆ ಸದಸ್ಯರು – ಯಶ್‌ಪಾಲ್ ಸುವರ್ಣ

ಉಡುಪಿ ಎಪ್ರಿಲ್ 07: ಉಡುಪಿಯಲ್ಲಿ ಹಿಜಾಬ್ ಹೋರಾಟ ನಡೆಸುತ್ತಿರುವ ವಿಧ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಸಾಭೀತಾಗಿದೆ ಎಂದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.
ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ಹಿಜಾಬ್ ಪರವಾಗಿ ನೀಡಿರುವ ಹೇಳಿಕೆಯಿಂದ ಸಾಬೀತಾಗಿದ್ದು, ಹಿಜಾಬ್ ವಿವಾದದ ಹಿಂದೆ ದೇಶದ್ರೋಹಿ ಸಂಘಟನೆಯ ಕೈವಾಡ ಇರುವ ಬಗ್ಗೆ ಶಂಕೆ ಇತ್ತು. ಇದೀಗ ಭಯೋತ್ಪಾದಕನ ಹೇಳಿಕೆಯಿಂದ ದೃಢವಾಗಿದೆ. ಹಿಜಾಬ್ ಗೊಂದಲ ಹುಟ್ಟುಹಾಕಿದ ಉಡುಪಿಯ ಆರು ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ವಿರುದ್ಧ ಎನ್‌ಐಎ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್‌ಗೆ ಬಹುಮಾನ ಕೊಟ್ಟವರ ವಿರುದ್ಧವೂ ಎನ್‌ಐಎ ತನಿಖೆ ನಡೆಯಬೇಕು. ಭಯೋತ್ಪಾದನಾ ಸಂಘಟನೆಗಳ ಜತೆಗಿನ ನಂಟು ಬಹಿರಂಗವಾಗಬೇಕು ಎಂದರು.
