LATEST NEWS
ಕುಂದಾಪುರ – ಹಿಜಬ್ ಧರಿಸಿ ಬಂದ ವಿಧ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದ ಪ್ರಾಂಶುಪಾಲ
ಕುಂದಾಪುರ ಫೆಬ್ರವರಿ 03: ಉಡುಪಿ ಹಿಜಬ್ ವಿವಾದ ಇದೀಗ ಕುಂದಾಪುರ ಸರಕಾರಿ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದು, ಇಂದು ಹಿಜಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿಧ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಗೆ ಕಳುಹಿಸಿದ್ದಾರೆ.
ಉಡುಪಿ ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ಇದೀಗ ಇಡೀ ಕರ್ನಾಟಕಕ್ಕೆ ಹಬ್ಬುವ ಆತಂಕ ಎದುರಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಹಿಜಬ್ ಧರಿಸಿ ತರಗತಿಗೆ ಬರಲ ಮುಸ್ಲಿಂ ವಿಧ್ಯಾರ್ಥಿನಿಯರಿಗೆ ಅವಕಾಶ ನಿರಾಕರಿಸಲಾಗಿದೆ.
ಎಂದಿನಂತೆ ಹಿಜಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಸ್ವತಃ ಕಾಲೇಜಿನ ಗೇಟ್ ಬಳಿ ತೆರಳಿ ತಡೆದಿದ್ದಾರೆ. ಹಿಜಬ್ ಕಳಚಿ ಕ್ಲಾಸಿಗೆ ಬರುವಂತೆ ಪ್ರಿನ್ಸಿಪಾಲ್ ಸೂಚನೆ ನೀಡಿದ್ದಾರೆ. ಈ ಸಂದರ್ಭ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಿದ್ಯಾರ್ಥಿನಿಯರ ವಾಗ್ವಾದ ನಡೆದಿದ್ದು, ಸರಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿನಿಯರ ವಾದ ಮಾಡಿದ್ದಾರೆ, ಆದರೆ ಪ್ರಾಂಶುಪಾರಲರು ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ. ಕೇವಲ ಉಡುಪಿ ಕಾಲೇಜಿಗೆ ಅಲ್ಲ ಎಂದು ವಿಧ್ಯಾರ್ಥಿನಿಯರಿಗೆ ಸಮಜಾಯಿಷಿ ನೀಡಿದರು.
ಇನ್ನು ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೊಂದಿಗೆ ಪೊಷಕರ ಸಭೆ ವಿಫಲವಾಗಿತ್ತು.