Connect with us

    LATEST NEWS

    ಮಲ್ಪೆ – ಕಂಪೌಂಡ್ ಗೊಡೆಗೆ ಡಿಕ್ಕಿ ಹೊಡೆದ ಬೈಕ್ ಆಯುರ್ವೇದ ವೈದ್ಯಕೀಯ ವಿಧ್ಯಾರ್ಥಿ ಸಾವು

    ಉಡುಪಿ ಫೆಬ್ರವರಿ 3:ಕಂಪೌಂಡ್ ಗೊಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವೈದ್ಯಕೀಯ ವಿಧ್ಯಾರ್ಥಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಮಲ್ಪೆಯ ಕಡೆಕಾರಿನಲ್ಲಿ ನಡೆದಿದೆ.


    ಮೃತಪಟ್ಟವನನ್ನು ಉದ್ಯಾವರ ಎಸ್ಡಿಎಂ ಆಯುರ್ವೇದ ಕಾಲೇಜಿನ ವಿಧ್ಯಾರ್ಥಿ ಬೀದರ್ ಜಿಲ್ಲೆಯ ಋಷಿಕೇಶ್ (23) ಎಂದು ಗುರುತಿಸಲಾಗಿದೆ. ನಗರದ ಕುತ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಬುಧವಾರ ಮಧ್ಯರಾತ್ರಿ ಮಲ್ಪೆ ಬೀಚ್ ಗೆ ತನ್ನ ಬೈಕಿನಲ್ಲಿ ಒಬ್ಬರೇ ಹೋಗಿದ್ದು, ಬೈಕ್ ನಿಯಂತ್ರಣ ತಪ್ಪಿ ರಸ್ತೆಬದಿಯ ಕಂಪೌಂಡ್ ಗೋಡೆಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಋಷಿಕೇಶ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply