LATEST NEWS
ಉಡುಪಿ – ಬಿಸಿಲಿಗೆ ತತ್ತರಿಸಿದ ಜನತೆಗೆ ತಂಪೆರೆದ ಮಳೆ
ಉಡುಪಿ ಎಪ್ರಿಲ್ 20 : ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ, ಕರಾವಳಿಗೆ ಮಳೆ ಬರುತ್ತದೆ ಎಂದು ಹವಮಾನಾ ಇಲಾಖೆ ಮುನ್ಸೂಚನೆ ನೀಡಿದ್ದರೂ ಯಾವುದೇ ಮಳೆ ಬಾರದೆ ಜನ ತತ್ತರಿಸಿದ್ದರು. ಇದೀಗ ಮಳೆ ಆಗಮನವಾಗಿದ್ದು, ವಿಪರೀತ ಸೆಕೆಯಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ವರ್ಷಾಧಾರೆ ತಂಪೆರೆದಿದೆ.
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಪಡುಬಿದ್ರೆ, ಕಾಪು, ಶಿರ್ವ, ಕಾರ್ಕಳ, ಬೈಲೂರು, ಕುಂದಾಪುರ, ಬ್ರಹ್ಮಾವರ, ಬೈಂದೂರು ಮೊದಲಾದ ಭಾಗದಲ್ಲಿ ಶನಿವಾರ ಮುಂಜಾನೆ 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಾಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯ ವೇಳೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಮಂಗಳೂರಿನ ಹೊರ ವಲಯ, ಸುರತ್ಕಲ್, ಹಳೆಯಂಗಡಿ ಪರಿಸರದಲ್ಲಿ ಶುಕ್ರವಾರ ಮುಂಜಾನೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆ ಸುರಿದಿತ್ತು.