LATEST NEWS
ಉಡುಪಿ ಜಿಲ್ಲೆಯ ಮಣಿಪುರದಲ್ಲಿ ರಾಜ್ಯದಲ್ಲೇ ಅತ್ಯಧಿಕ 31.10 ಸೆಂ.ಮೀ ಮಳೆ….!!
ಉಡುಪಿ ಜುಲೈ 06: ಕರಾವಳಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಜೂನ್ ತಿಂಗಳಲ್ಲಿ ಬರದ ಮಳೆ ಸೇರಿ ಇದೀಗ ಮಳೆ ಸುರಿಯಲಾರಂಭಿಸದ್ದು. ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ಮಣಿಪುರದಲ್ಲಿ ಸುರಿದಿದೆ.
ಉಡುಪಿ ಜಿಲ್ಲೆಯ ಮಣಿಪುರದಲ್ಲಿ ಗುರುವಾರ ಬೆಳಿಗ್ಗೆ 8ಗಂಟೆವರೆಗೆ 24 ಗಂಟೆಗಳಲ್ಲಿ ಒಟ್ಟು 31.10 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದಲ್ಲೇ ಅತ್ಯಧಿಕ. ಉಡುಪಿ ಜಿಲ್ಲೆಯ ಕಾಂತಾವರದಲ್ಲಿ , 30.75 ಸೆಂ.ಮೀ, ಮುದರಂಗಡಿಯಲ್ಲಿ 30 ಸೆಂ.ಮೀ, ರೆಂಜಾಳದಲ್ಲಿ 28.75ಸೆಂ.ಮೀ, ವಡ್ಡರ್ಸೆಯಲ್ಲಿ 28.70 ಸೆಂ.ಮೀ, ಆತ್ರಾಡಿಯಲ್ಲಿ 28.50 ಸೆಂ.ಮೀ , ಪಾಂಡೇಶ್ವರದಲ್ಲಿ 27.95 ಸೆಂ.ಮೀ, ಮಲ್ಲೂರಿನಲ್ಲಿ 27.55 ಸೆಂ.ಮೀ, ಮಜೂರಿನಲ್ಲಿ 27.4 ಸೆಂ.ಮೀ, ಪಳ್ಳಿಯಲ್ಲಿ 26.90 ಸೆಂ.ಮೀ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಲ್ಲಡ್ಕದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ( 27.45ಸೆಂ.ಮೀ) ಮಳೆಯಾಗಿದೆ. ಕೆಮ್ರಾಲ್ ನಲ್ಲಿ 25.70 ಸೆಂ.ಮೀ , ಚೇಳ್ಯಾರುವಿನಲ್ಲಿ 25.20 ಸೆಂ.ಮೀ, ಬಳ್ಕುಂಜೆಯಲ್ಲಿ 24.80 ಸೆಂ.ಮೀ, ಪಡುಮಾರ್ನಾಡುವಿನಲ್ಲಿ 24.65 ಸೆಂ.ಮೀ, ಫಜೀರುವಿನಲ್ಲಿ 24.40 ಸೆಂ.ಮೀ, ಬೆಳುವಾಯಿಯಲ್ಲಿ 24.10 ಸೆಂ.ಮೀ , ಬಾಳದಲ್ಲಿ 23.80 ಸೆಂ.ಮೀ , ಪುತ್ತಿಗೆಯಲ್ಲಿ 23.60 ಸೆಂ.ಮೀ ಹಾಗೂ ಎಕ್ಕಾರುವಿನಲ್ಲಿ 23.30 ಸೆಂ.ಮೀ. ಮಳೆಯಾಗಿದೆ.
ಬುಧವಾರ ದಿನವಿಡೀ ಉಡುಪಿ ನತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿದಿತ್ತು. ಬುಧವಾರ ರಾತ್ರಿಯೂ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ.