Connect with us

LATEST NEWS

ತಲಪಾಡಿ – ಭಾರೀ ಮಳೆ ಗಾಳಿಗೆ ಉರುಳಿ ಬಿದ್ದ ಶಾಲೆಯ ಮಲ್ಚಾವಣೆ ಶೀಟ್..ರಜೆ ಕಾರಣ ತಪ್ಪಿ ಅನಾಹುತ

Share Information

ಉಳ್ಳಾಲ ಜುಲೈ 06: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರೀ ಮಳೆ ಗಾಳಿಗೆ ತಲಪಾಡಿಯಲ್ಲಿರುವ ಶಾರದಾ ವಿದ್ಯಾಲಯ ಕಟ್ಟಡದ ಮೇಲೆ ಅಳವಡಿಸಿದ್ದ ಶೀಟ್‌ ಚಾವಣಿ ಕೆಳಗೆ ಬಿದ್ದ ಘಟನೆ ನಡೆದಿದೆ.


ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಆರು ಮಹಡಿಯ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಇದನ್ನು ಅಳವಡಿಸಲಾಗಿತ್ತು. ಸತತ ಗಾಳಿ ಮಳೆ ಕಾರಣದಿಂದಾಗಿ ಇದು ಬೆಳಿಗ್ಗೆ 9 ಗಂಟೆ ಸಂದರ್ಭ ಶೀಟ್ ಕೆಳಗೆ ಬಿದ್ದಿದೆ. ಮೇಲ್ಚಾವಣೆಗೆ ಹಾಕಲಾಗಿದ್ದ ರಾಡ್ ಗಳೂ ಕೂಡ ಕೆಳಗೆ ಬಿದ್ದಿದ್ದು, ಇದರಿಂದಾಗಿ ಹಲವು ವಾಹನಗಳು ಜಖಂಗೊಂಡಿವೆ.

ಭಾರಿ ಮಳೆ ಕಾರಣ ಸತತ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಿಗೆ ಜಿಲ್ಲಾ ಆಡಳಿತ ರಜೆ ಘೋಷಿಸಿದೆ. ಹೀಗಾಗಿ ಈ ಶಾಲೆಗೂ ರಜೆ ಇತ್ತು.


Share Information
Advertisement
Click to comment

You must be logged in to post a comment Login

Leave a Reply