KARNATAKA
ಉಡುಪಿ : ಶಿರ್ವ ಶ್ರಿಸಿದ್ಧಿವಿನಾಯಕ ದೇವಳದ ಸಂಸ್ಥಾಪಕ ಗ್ಯಾಬ್ರಿಯಲ್ ನಜ್ರೆತ್ ಇನ್ನಿಲ್ಲ

ಉಡುಪಿ : ತನ್ನ ತಂದೆ ತಾಯಿಯ ಸವಿ ನೆನಪಿನಲ್ಲಿ ಉಡುಪಿ ಶಿರ್ವದ ತನ್ನ ಸ್ವಂತ ಜಮೀನಿನಲ್ಲಿ ಶ್ರೀಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ ಗ್ಯಾಬ್ರಿಯಲ್ ನಜ್ರೆತ್(87) ರವಿವಾರ ಉಡುಪಿ ಶಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ಗ್ಯಾಬ್ರಿಯಲ್ ನಜ್ರೆತ್ ಪರೋಪಕಾರಿಗಳಾಗಿದ್ದು ಹಲವು ಬಡಹೆಣ್ಣು ಮಕ್ಕಳ ವಿವಾಹ, ಮಂಗಳ ಕಾರ್ಯಕ್ಕೆ ಧನ ಸಹಾಯ, ಬಡವರಿಗೆ ಮನೆ ನಿರ್ಮಾಣ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ, ಬಡರೋಗಿಗಳಿಗೆ ಧನ ಸಹಾಯ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಶ್ರೀ ದೇವಳದ ಸಮೀಪದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಲ್ಲಿ ಅವಕಾಶ ಮಾಡಲಾಗಿದ್ದು, ಸಂಜೆ 4ಗಂಟೆಗೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ದೇವಳದ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
