Connect with us

    UDUPI

    ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ 14 ಮಂದಿಗೆ ಕೊರೊನಾ ಸೊಂಕು – ಆಸ್ಪತ್ರೆ ಸೀಲ್ ಡೌನ್

    ಉಡುಪಿ ಜುಲೈ 16: ಉಡುಪಿ ಅಜ್ಜರಕಾಡುವಿನಲ್ಲಿರುವ ಜಿಲ್ಲಾಸ್ಪತ್ರೆಯ ವೈದ್ಯರು , ರೋಗಿಗಳು ಸೇರಿದಂತೆ 14 ಮಂದಿಗೆ ಕೊರೊನಾ ಸೊಂಕು ತಗುಲಿರುವ ಹಿನ್ನಲೆ ಜಿಲ್ಲಾಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.


    ಗ್ಯಾಂಗ್ರಿನ್ ಸಮಸ್ಯೆಗೆ ದಾಖಲಾಗಿದ್ದ ರೋಗಿಗೆ ಕೊರೊನಾ ಆವರಿಸಿದ್ದು, ಶಸ್ತ್ರಚಿಕಿತ್ಸೆಯ ನಂತರ ಜ್ವರಕ್ಕೆ ತುತ್ತಾಗಿದ್ದರು. ಈತನ ವಾರ್ಡ್‍ನಲ್ಲಿದ್ದ ಒಟ್ಟು 9 ರೋಗಿಗಳಿಗೂ ಸೋಂಕು ತಗುಲಿದೆ. ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್ ಗೆ ಕೊರೊನಾ ಅಂಟಿದೆ. ಫ್ಲೋರ್ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿ, ಅಡುಗೆಯವರಿಗೆ ಕೊರೊನಾ ಬಂದಿದೆ. ಓರ್ವ ಸೋಂಕಿತ ವೈದ್ಯರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ, ಸಂಬಂಧಿಕರಿಗೆ ಸದ್ಯ ಗೃಹ ದಿಗ್ಬಂಧನ ವಿಧಿಸಲಾಗಿದೆ.


    ಸೋಂಕಿತರ ವಾರ್ಡ್, ಶಸ್ತ್ರಚಿಕಿತ್ಸೆ ಮಾಡಿದ ಕೊಠಡಿ ಸೀಲ್‍ಡೌನ್ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆ ಸಂಪೂರ್ಣ ಸ್ಯಾನಿಟೈಸ್‍ಗೆ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಬಳಿಕ ಆಸ್ಪತ್ರೆ ಓಪನ್ ಆಗಲಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಸದ್ಯ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ, ಶಂಕಿತ ಕೋವಿಡ್ ರೋಗಿಗಳಿರುವ ಪ್ರತ್ಯೇಕಿತ ವಾರ್ಡ್ ಕಾರ್ಯನಿರ್ವಹಣೆ ಆಸ್ಪತ್ರೆಗೆ ಒಳರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಹೊರರೋಗಿ ವಿಭಾಗವೂ ಸೇವೆಗೆ ಲಭ್ಯವಿರುವುದಿಲ್ಲ. ಸದ್ಯ ಆಸ್ಪತ್ರೆಯಲ್ಲಿ 90 ಒಳರೋಗಿಗಳಿದ್ದಾರೆ.
    ಆಸ್ಪತ್ರೆಯೊಳಗಿರುವ ಎಲ್ಲರ ಕೋವಿಡ್ ಟೆಸ್ಟ್ ಮಾಡಿ, ಎರಡು ದಿನ ಬಿಟ್ಟು ಮತ್ತೆ ಜಿಲ್ಲಾಸ್ಪತ್ರೆ ಸೇವೆಗೆ ಲಭ್ಯವಿದೆ ಎಂದು ಸರ್ಜನ್ ಮಧುಸೂದನ್ ನಾಯಕ್ ಮಾಹಿತಿ ನೀಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *