UDUPI
ಎರಡನೇ ಬಾರಿ ಸೀಲ್ ಡೌನ್ ಆದ ಬೈಂದೂರು ಪೊಲೀಸ್ ಠಾಣೆ
ಉಡುಪಿ ಜುಲೈ 16: ಉಡುಪಿ ಜಿಲ್ಲೆಯಲ್ಲಿ ಪೊಲೀಸರನ್ನು ಕೊರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ಈಗಾಗಲೇ ಕೊರೊನಾದಿಂದಾಗಿ ಉಡುಪಿಯ ಕೆಲವು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈಗ ಮತ್ತೆ ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್ ಡೌನ್ ಆಗಿದೆ.
ಬೈಂದೂರ ಠಾಣೆಯ ಎಎಸ್ಐ ಸೇರಿದಂತೆ ಮೂವರು ಸಿಬ್ಬಂದಿಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆ ಠಾಣೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ದೃಢಪಟ್ಟ ಎಎಸ್ಐ, ಮಹಿಳಾ ಪೊಲೀಸ್ ಹೋಂ ಗಾರ್ಡ್ ಸೇರಿದಂತೆ ಮೂವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮೊದಲು ಬೈಂದೂರು ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಕಾಣಿಸಿಕೊಂಡ ಹಿನ್ನಲೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು.