Connect with us

    UDUPI

    ಉಡುಪಿ – ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರ

    ಉಡುಪಿ, ಆಗಸ್ಟ್ 20 : ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರ ಇಂದು ನಡೆಯಿತು.


    ಉಡುಪಿ ನಗರ ಸಭೆ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಂಥಾಲಯದ ಆವರಣದಲ್ಲಿ ಮಲಬಾರ್ ಗೋಲ್ಡ್ ಇವರ ವತಿಯಿಂದ ಉಚಿತವಾಗಿ ನೀಡಿದ ವಿವಿದ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಡೀ ಉಡುಪಿ ಜಿಲ್ಲೆಗೆ ಮಾದರಿಯಾದ ಈ ಗ್ರಂಥಾಲಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕು ಡಿಜಿಟಲ್ ಗ್ರಂಥಾಲಯ ಕಾರ್ಯಾಗಾರವನ್ನು ಬಳಸಿಕೊಂಡು ಇ- ಗ್ರಂಥಾಲಯದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಮಲಬಾರ್ ಗೋಲ್ಡ್ನ ವ್ಯವಸ್ಥಾಪಕರಾದ ರಾಘವೇಂದ್ರ ನಾಯಕ್ ಇವರು ಮಾತನಾಡಿ, “ಪುಸ್ತಕ ಓದುವ ಜ್ಞಾನದೇಗುಲವೆಂದರೆ ಅದು ಗ್ರಂಥಾಲಯ, ಆ ಗ್ರಂಥಾಲಯದ ಅಂದವನ್ನು ಇನ್ನೂ ಹೆಚ್ಚಿಸಲು ಗ್ರಂಥಾಲಯದ ಆವರಣದಲ್ಲಿ ಉತ್ತಮ ಸಸಿಗಳನ್ನು ನೆಡಬೇಕು ಮತ್ತು ಗ್ರಂಥಾಲಯದಲ್ಲಿ ಶುದ್ಧವಾದ ವಾತಾವರಣವನ್ನು ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಸಸಿಗಳನ್ನು ಈ ಗ್ರಂಥಾಲಯಕ್ಕೆ ನೀಡಿದ್ದೇವೆ ಎಂದರು.

    ಮುಖ್ಯ ಅತಿಥಿಯಾಗಿದ್ದ, ರೀನಾ ಎಸ್. ಹೆಗ್ಡೆ, ಜಿಲ್ಲಾ ಸಂಯೋಜಕರು, ಶಿಕ್ಷಣ ಪೌಂಡೇಶನ್ ಇವರು ಮಾತನಾಡಿ “ಗ್ರಂಥಾಲಯವು ಜ್ಞಾನ ದೇಗುಲ ಮಾತ್ರವಲ್ಲ, ಮನುಷ್ಯನ ಮನಸ್ಸನ್ನು ಸದೃಢಮಾಡುವ ಭಂಡಾರವಿದ್ದಂತೆ. ಮನಸ್ಸನ್ನು ಸಧೃಡ ಮಾಡಿಕೊಂಡಲ್ಲಿ ನಾವು ಜೀವನದ ಗುರಿ ತಲುಪಲು ಸಾಧ್ಯ. ನೂರು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ ಪುಸ್ತಕ ಎಂಬ ಒಬ್ಬ ಸ್ನೇಹಿತನನ್ನು ಸಂಪಾದಿಸಿದರೆ ಉತ್ತಮ ಜೀವನವನ್ನು ರೂಪಿಸಬಹುದು ಎಂದರು.

    ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರಿಜಾ ಹೆಗ್ಡೆ ಗಾಂವ್‌ಕರ್, ಮಾತನಾಡಿ “ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಧದ ವಿಭಾಗಗಳಿದ್ದು, ಬಹಳಷ್ಟು ಪುಸ್ತಕಗಳು ಲಭ್ಯವಿರುತ್ತದೆ. ಅಲ್ಲದೆ, ವಿವಿಧ ರೀತಿಯ ಕಾರ್ಯಾಗಾರವನ್ನು ಗ್ರಂಥಾಲಯದಲ್ಲಿ ಆಗಾಗ ಮಾಡುತ್ತಿರುವುದು ಬಹಳ ಉಪಯುಕ್ತವಾಗುತ್ತಿದೆ. ಇದರಿಂದ, ಜನರು ಗ್ರಂಥಾಲಯದತ್ತ ಆಕರ್ಷಿತರಾಗುವುದರಲ್ಲಿ ಸಂಶಯವಿಲ್ಲ. ಎಂದರು. ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾರಾ “ಗ್ರಂಥಾಲಯಕ್ಕೆ ಭೇಟಿ ನೀಡಿರುವುದು ನನಗೆ ಹಾಗೂ ನನ್ನ ಸಹಪಾಠಿಗಳಿಗೆ ಬಹಳಷ್ಟು ಸಂತೋಷವಾಗಿದೆ. ಗ್ರಂಥಾಲಯದಲ್ಲಿ ವಿವಿಧ ವಿಭಾಗಗಳಿದ್ದು, ಇದರಿಂದ ಎಲ್ಲಾ ವಯೋಮಾನದವರಿಗೆ ಅನುಕೂಲವಾಗಿದೆ. ಹಾಗೂ ಇವತ್ತು ಹಮ್ಮಿಕೊಂಡ ಈ ಕಾರ್ಯಾಗಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ , ಡಿಜಿಟಲ್ ಗ್ರಂಥಾಲಯವನ್ನು ಎಲ್ಲಾ ಕಡೆಗಳಲ್ಲೂ ಸದ್ಬಳಕೆ ಮಾಡಬೇಕೆಂಬ ಅರಿವು ಮೂಡಿದೆ ಎಂದರು. ಈ ಗ್ರಂಥಾಲಯದಲ್ಲಿ
    ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಹಿಳೆಯಾದ್ದರಿಂದ, ಮಹಿಳೆಯರ ಶಕ್ತಿ ಪ್ರಬಲವಾಗಿದೆ ಎಂದರು.

    ವಿದ್ಯಾರ್ಥಿನಿ ವಿಜೇತ ಇವರು ತಮ್ಮಲ್ಲಿ ಸಂಗ್ರಹವಿರುವ ಕೆಲವೊಂದು ಪುಸ್ತಕಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ನಗರ ಕೇಂದ್ರ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಪೌಂಡೇಶನ್‌ನ ಕುಂದಾಪುರ ತಾಲೂಕಿನ ಸಂಯೋಜಕರಾದ ನಮಿತಾ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ, ಜಯಶ್ರೀ ಯಂ, ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *