LATEST NEWS
ಉಡುಪಿಯಲ್ಲಿ ಪಟಾಕಿ ಬದಲು ಮಣ್ಣಿನ ಹಣತೆಗಳ ಟ್ರೆಂಡ್
ಉಡುಪಿ ನವೆಂಬರ್ 13: ರಾಜ್ಯ ಸರ್ಕಾರ ಈ ಬಾರಿ ಸಾಂಕ್ರಾಮಿಕ ಕೊರೋನದ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ ಮಾಡಿದೆ. ಪಟಾಕಿ ನಿಷೇಧ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಆರಂಭದಲ್ಲಿ ವಿರೋಧ ಬಂದರೂ, ಈಗ ಜನ ತಮ್ಮ ಮನಸ್ಥಿತಿಯನ್ನು ಬದಲು ಮಾಡಿಕೊಳ್ಳುತ್ತಿದ್ದಾರೆ.
ಪಟಾಕಿಗೆ ಸುರಿಯುವ ಸಾವಿರ ರೂಪಾಯಿ ದುಡ್ಡಿನ ಬದಲು ಆ ದುಡ್ಡಿನಲ್ಲಿ ಮಣ್ಣಿನ ಹಣತೆ ಹಚ್ಚೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿದ್ದೇ ಮಾಡಿದ್ದು , ಉಡುಪಿ ಜಿಲ್ಲೆ ಪೆರ್ಡೂರಿನ ಕುಂಬಾರರ ಸೇವಾ ಸಹಕಾರಿ ಸಂಘ ಭಾರಿ ಸಂಖ್ಯೆಯಲ್ಲಿ ಮಣ್ಣಿನ ಹಣತೆಗಳನ್ನು ತಯಾರು ಮಾಡಿದೆ.
ಈಗಾಗಲೇ ಉಡುಪಿ ನಗರದಾದ್ಯಂತ ಮಣ್ಣಿನ ಹಣತೆಗಳು ರಾರಾಜಿಸುತ್ತಿದೆ. ಮಣ್ಣಿನ ಹಣತೆಗಳನ್ನು ಖರೀದಿಸಿದ ಗ್ರಾಹಕರಿಗೆ ರಂಗು ರಂಗಿನ ಬಟ್ಟೆಯ ಚೀಲಗಳನ್ನು ಸಂಸ್ಥೆ ತಯಾರು ಮಾಡಿದೆ. ಗಿಫ್ಟ್ ಪ್ಯಾಕ್ ಮಾದರಿಯಲ್ಲಿ ಮಣ್ಣಿನ ಹಣತೆಗಳನ್ನು ಬ್ಯಾಗಲ್ಲಿ ತುಂಬಿ ದೀಪಾವಳಿ ಗಿಫ್ಟ್ ಕೊಡುವ ಕಾನ್ಸೆಪ್ಟ್ ಬಾರಿ ಉಡುಪಿಯಲ್ಲಿ ಟ್ರೆಂಡಾಗಿದೆ.
ಸಾಂಕ್ರಾಮಿಕ ದ ಸಂದರ್ಭದಲ್ಲಿ ಎಲ್ಲೆಲ್ಲೋ ತಯಾರಿಸಿದ ಸಿಹಿ ತಿಂಡಿಗಳನ್ನು ಕೊಡುವ ಬದಲು, ಗ್ರೀನ್ ಪಟಾಕಿ ಹೆಸರಲ್ಲಿ ದುಡ್ಡು ಸುಡುವಬದಲು ಕುಂಬಾರರ ಗುಡಿ ಕೈಗಾರಿಕೆ ಗಳನ್ನು ಬೆಂಬಲಿಸುವ ಜೊತೆಗೆ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸೋಣ.
https://youtu.be/LNDOUPaFsHA