LATEST NEWS
ಮಂಗಳೂರಿನಲ್ಲಿ ಸಂಜೆ ಸುರಿದ ಗುಡುಗು ಸಿಡಿಲು ಸಹಿತ ಭಾರೀ ಮಳೆ

ಮಂಗಳೂರು ನವೆಂಬರ್ 13: ಚಳಿಗಾಲದ ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರು ನಗರದಲ್ಲಿ ಇಂದು ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ.
ಸಂಜೆ 7 ಗಂಟೆಯ ನಂತರ ಪ್ರಾರಂಭವಾದ ಮಳೆ ಎಡೆಬಿಡದೆ ಸುರಿದಿದ್ದು, ಮಳೆ ಜೊತೆ ಗುಡುಗು ಸಿಡಿಲು ಆರ್ಭಟ ಜೋರಾಗಿಯೇ ಇತ್ತು. ದೀಪಾವಳಿ ಸಂಭ್ರಮದ ಶಾಪಿಂಗ್ ನಲ್ಲಿದ್ದ ಜನರಿಗೆ ಮಳೆ ತೊಂದರೆ ನೀಡಿದೆ.

ಶ್ರೀಲಂಕಾದ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಿಂದ ಉತ್ತರ ಆಂಧ್ರಪ್ರದೇಶದ ಪಶ್ಚಿಮಕೇಂದ್ರ ಬಂಗಾಳ ಕೊಲ್ಲಿಯವರೆಗೆ ಸುಳಿಗಾಳಿಯು ಈಗ ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಡೆಗೆ ಚಂಡಮಾರುತದ ಸನ್ನಿವೇಶ ಉಂಟುಮಾಡಿದೆ. ಹೀಗಾಗಿ ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ನವೆಂಬರ್ 12 ರಿಂದ 14ರವರೆಗೆ ಮೋಡಕವಿದ ವಾತಾವರಣ ಇರಲಿದ್ದು, ಮಳೆ ಸುರಿಯಬಹುದು ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕೂಡ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.