LATEST NEWS
ಮನವಿಗೆ ಬೆಲೆ ಕೊಡದಿದ್ದರೆ ಕಠಿಣ ಕ್ರಮ – ಉಡುಪಿ ಜಿಲ್ಲಾಧಿಕಾರಿ ವಾರ್ನಿಂಗ್
ಉಡುಪಿ ಜೂನ್ 24: ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದ ಉಡುಪಿ ನಗರಸಭೆಯ ಜನಪ್ರತಿನಿಧಿಗಳ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಗರಂ ಆಗಿದ್ದು, ಸಣ್ಣವರಿಗೆ ದೊಡ್ಡವರಿಗೆ ಕಾನೂನು ಒಂದೇ ಆಗಿದ್ದು, ಎಷ್ಟೆ ದೊಡ್ಡವರಾದರೂ ಬಿಡಲ್ಲ ಎಂದು ಎಚ್ಚರಿಸಿದ್ದಾರೆ.
ನಿನ್ನೆ ಉಡುಪಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೆ ಪಾಲ್ಗೊಂಡಿದ್ದು, ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು, ಈ ಹಿನ್ನಲೆ ಇಂದು ಈ ಕುರಿತಂತೆ ಖಡಕ್ ವಾರ್ನಿಂಗ್ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಜಿಲ್ಲೆಯಲ್ಲಿ ನಿರ್ಬಂಧ ಸಡಿಲ ಮಾಡಿರುವುದು ಸರ್ಕಾರವೇ ಹೊರತು ಕೊರೋನಾ ಅಲ್ಲ, ಸರ್ಕಾರದ ಆದೇಶ ಪಾಲಿಸಿವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕೆಲವರು ನಿರ್ಬಂಧ ಸಡಿಲಿಕೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ.
ಯಾವುದೇ ಕಾರ್ಯಕ್ರಮ ಆಯೋಜಿಸಕೂಡದು ಎಂದು ಸರ್ಕಾರ ಹೇಳಿದೆ, ಆದರೆ ಕಾರ್ಯಕ್ರಮಗಳ ಆಯೋಜನೆ ನಡಿತಾನೇ ಇದೆ. ಸಂಘ-ಸಂಸ್ಥೆ ಮತ್ತು ರಾಜಕೀಯ ಪಕ್ಷಗಳು ಕಾರ್ಯಕ್ರಮ, ಪ್ರತಿಭಟನೆ ಮಾಡುತ್ತಲೇ ಇದ್ದಾರೆ
ನಿಮಗೆಲ್ಲಾ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟವರು ಯಾರು? ಜಿಲ್ಲಾಡಳಿತಕ್ಕೆ ಅವಕಾಶ ಇಲ್ಲ ಅಂದ್ಮೇಲ್ ನಿಮಗೆ ಅನುಮತಿ ಕೊಟ್ಟದ್ದು ಯಾರು? ಕಾರ್ಯಕ್ರಮ ಆಯೋಜಕರು ಸಾರ್ವಜನಿಕರ ಜೀವನದ ಜೊತೆ ಆಟವಾಡ್ತಿದ್ದಾರೆ.
ಸಣ್ಣವರಿಗೆ -ದೊಡ್ಡವರಿಗೆ ಎಲ್ಲರಿಗೂ ಕಾನೂನು ಒಂದೇ ಜನಪ್ರತಿನಿಧಿಗಳು ಕಾನೂನು ಪಾಲನೆ ಮಾಡಿದ್ರೆ, ಅವರ ಕಾರ್ಯಕರ್ತರು ಪಾಲನೆ ಮಾಡ್ತಾರೆ,ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ್ರೆ ಎಷ್ಟೇ ದೊಡ್ಡವರಾದ್ರೂ ಬಿಡಲ್ಲ, ಯಾರೂ ಕೂಡಾ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ, ಈ ಮನವಿಗೆ ಬೆಲೆ ಕೊಡದಿದ್ರೆ ಎಪಿಡೆಮಿಕ್ ಆಕ್ಟ್ ಪ್ರಕಾರ ಕಠಿಣ ಕ್ರಮ ಖಚಿತ ಎಂದು ಎಚ್ಚರಿಸಿದ್ದಾರೆ.