Connect with us

    KARNATAKA

    ಲಾಕ್ ಡೌನ್ ನಲ್ಲಿ ರೋಡ್ ರೊಲರ್ ನ್ನೇ… ಕದ್ದು ಮಾರಾಟ ಮಾಡಿದ ಖತರ್ನಾಕ್ ಜೋಡಿ…!!

    ಬೆಂಗಳೂರು : ಲಾಕ್ ಡೌನ್ ನಲ್ಲಿ ಮೈದಾನದಲ್ಲಿ ನಿಲ್ಲಿಸಿದ್ದ ರೋಡ್ ರೊಲರ್ ನ್ನು ಕದ್ದು ಗುಜರಿಗೆ ಮಾರಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು ಪೊಲೀಸರು ಬಂಧಿಸಿದ್ದಾರೆ.


    ಬಂಧಿತನನ್ನು ನಾಗರಬಾವಿ ನಿವಾಸಿ ಪವನ್ ಕುಮಾರ್ (22) ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿದ್ದ ವಿನಯ್ ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ತಮಿಳುನಾಡಿನವರಾದ ವಾಹನದ ಮಾಲೀಕ ಲಾಕ್‌ಡೌನ್‌ ಇದ್ದಿದ್ದರಿಂದ ನಾಗರಬಾವಿಯ ಖಾಲಿ ಮೈದಾನದಲ್ಲಿ ವಾಹನ ನಿಲ್ಲಿಸಿ, ಊರಿಗೆ ತೆರಳಿದ್ದರು. ಮತ್ತೆ ಬಂದು ನೋಡಿದಾಗ ವಾಹನ ಆ ಜಾಗದಲ್ಲಿ ಅಲ್ಲಿರಲಿಲ್ಲ. ಮಾಲೀಕ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು.

    ‘ಆರೋಪಿ ಪವನ್ ಹಾಗೂ ವಿನಯ್ ವಾಹನ ಕದ್ದೊಯ್ದು, ಮಾಗಡಿ ರಸ್ತೆಯ ಸೀಗೆಹಳ್ಳಿಯ ಗುಜರಿ ವ್ಯಾಪಾರಿ ಇಸ್ಮಾಯಿಲ್‌ಗೆ ಮಾರಿದ್ದರು. ವಾಹನ ಪೂರ್ಣ ಕಬ್ಬಿಣದಲ್ಲೇ ಇದ್ದಿದ್ದರಿಂದ ತೂಕದ ಲೆಕ್ಕದಲ್ಲಿ ಮಾರಾಟ ಮಾಡಿ ಹಣ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದರು. ‘ಖರೀದಿಸಿದ ನಂತರ ಗುಜರಿಗೆ ಹಾಕಲು ವಾಹನದ ಬಿಡಿಭಾಗಗಳನ್ನು ತೆಗೆದು ತೂಕ ಹಾಕಲಾಗಿತ್ತು. ಸದ್ಯ ವಾಹನವನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply