Connect with us

UDUPI

ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ ಆಗ್ತಾರಾ….??? – ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

ಉಡುಪಿ ಜುಲೈ 30: ದಕ್ಷಿಣಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ನಂತರ ಈಗ ಮತ್ತೊಬ್ಬರು ಜಿಲ್ಲಾಧಿಕಾರಿ ವರ್ಗಾವಣೆ ಆಗ್ತಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಉಡುಪಿಯಲ್ಲಿ ಬಕ್ರಿದ್ ಆಚರಣೆಯ ವಿಚಾರದಲ್ಲಿ ಸಭೆ ನಂತರ ವೆಬ್ ಪೋರ್ಟಲ್ ಒಂದರಲ್ಲಿ ಬಂದ ಸುದ್ದಿಯಿಂದಾಗಿ ಉಡುಪಿ ಡಿಸಿ ಜಿ.ಜಗದೀಶ್ ವರ್ಗಾವಣೆ ಆಗ್ತಾರ ??? ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಉಡುಪಿಯಲ್ಲಿ ಬಕ್ರೀದ್ ಆಚರಣೆಯ ವಿಚಾರವಾಗಿ ಕರೆದ ಸಭೆಯಿಂದಲೇ ಈ ಗೊಂದಲ ಸೃಷ್ಟಿಯಾಗಿದ್ದು, ಶಾಂತಿಯುತ ಬಕ್ರೀದ್ ಆಚರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತು, ಸಭೆಯ ಬಳಿಕ ವೆಬ್ ಪೋರ್ಟಲ್ ನಲ್ಲಿ ಸಭೆಯ ಹೈಲೈಟ್ ಸುದ್ದಿ ವರದಿಯಾಗಿದ್ದು, ಜಾನುವಾರು ಸಾಗಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಂಡರೆ ಕ್ರಮ ಹೆಡ್ ಲೈನ್ ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಡಿಸಿ ವರ್ಗಾವಣೆ ಬಗ್ಗೆ ಚರ್ಚೆ ಪ್ರಾರಂಭವಾಗಿತ್ತು.

ಈ ವಿಷಯ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಗಮನಕ್ಕೆ ಬಂದ ಕೂಡಲೆ ವಾರ್ತಾ ಭಾರತಿ ‌ಪೇಜ್ ನಲ್ಲಿಯೇ ಸುದ್ದಿ ಬಗ್ಗೆ ಸ್ಪಷ್ಟೀಕರಣ ನೀಡಿ ಜಿಲ್ಲಾಧಿಕಾರಿ..ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.. ಕೇವಲ ಶಾಂತಿಯುತ ಬಕ್ರೀದ್ ಆಚರಣೆ ಮಾಡಿ ಎಂದು ಕರೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


ದಕ್ಷಿಣಕನ್ನಡ ಜಿಲ್ಲಾಧಿಕಾರಿ ಗೋಸಾಗಾಟದ ಹೇಳಿಕೆ ನೀಡಿದ ಬೆನ್ನಲ್ಲೆ ವರ್ಗಾವಣೆ ನಂತರ. ಉಡುಪಿ ಜಿಲ್ಲಾಧಿಕಾರಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಜಿಲ್ಲಾಧಿಕಾರಿ ಈ ಸುದ್ದಿ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

Facebook Comments

comments