Connect with us

UDUPI

ನಾಗಪಂಚಮಿ ವಿಚಾರದಲ್ಲಿ ನನ್ನ ಹೆಸರಿನಲ್ಲಿ ತಪ್ಪು ಸಂದೇಶ ರವಾನಿಸಲಾಗುತ್ತಿದೆ – ಉಡುಪಿ ಜಿಲ್ಲಾಧಿಕಾರಿ

ಉಡುಪಿ ಜುಲೈ 24: ಉಡುಪಿ ಜಿಲ್ಲೆಯಲ್ಲಿ ನಾಗರಪಂಚಮಿಗೆ ಅವಕಾಶ ಇಲ್ಲ , ನಾಗಾರಾಧನೆ ಮಾಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ. ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲವು ದುಷ್ಕರ್ಮಿಗಳು ನಡೆಸುತ್ತಿದ್ದು, ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ನಾಳೆ ನಾಗರ ಪಂಚಮಿ ಹಬ್ಬ ಇದ್ದು ಮನೆಗಳಲ್ಲಿ ನಾಗಾರಾಧನೆ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಅವರು ಕೊರೊನಾ ಕಾಲದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು. ಅವರವರ ಮನೆಯಲ್ಲಿ ನಾಗನ ಕಲ್ಲಿಗೆ ಹಾಲು ಎರೆಯಲು ಅಡ್ಡಿಯಿಲ್ಲ. ಮನೆಯಲ್ಲಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ. ಎಲ್ಲರಿಗೂ ನಾಗರಪಂಚಮಿ ಶುಭಾಶಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಶುಭ ಹಾರೈಸಿದ್ದಾರೆ.


ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಉಡುಪಿಯಲ್ಲಿ ನಾಗಪೂಜೆಗೆ ಅವಕಾಶ ಇಲ್ಲವೆಂಬ ಯಾರೂ ಸಂದೇಶ ರವಾನೆ ಮಾಡಬೇಡಿ ಎಂದರು.