UDUPI
ಕಂದಾಯ ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಎಚ್ಚರಿಕೆ
ಉಡುಪಿ ಜುಲೈ 24: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕೊರೊನಾ ಮಾರ್ಗದರ್ಶಿಗಳನ್ನು ಸರಿಯಾಗಿ ಜಾರಿಗೆ ತರದ ಕಂದಾಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಆಡಿಯೋ ಒಂದು ಈಗ ವೈರಲ್ ಆಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಜಿಲ್ಲಾಧಿಕಾರಿ ಜಗದೀಶ್ ಹೇಳಿರುವ ಮಾತುಗಳು……
ಎಸಿ, ತಹಶೀಲ್ದಾರ್ ,ವಿಲೇಜ್ ಅಕೌಂಟೆಂಟ್ ಮತ್ತು ಆರ್ ಐ ಗಮನವಿಟ್ಟು ಕೇಳಿ …ನಾವು ಮಾಡುತ್ತಿರುವ ಕಂಟೈನ್ಮೆಂಟ್ ಝೋನ್ ಸರಿಯಾದ ಕ್ರಮದಲ್ಲಿ ಇಲ್ಲ.. ಸದ್ಯ ಸಾಕಷ್ಟು ಸ್ಥಳೀಯ ಪ್ರಕರಣಗಳೇ ಬರುತ್ತಿವೆ.. ಇನ್ನು ಮುಂದೆ ಆ ಊರು ಅಥವಾ ಏರಿಯಾವನ್ನೇ ಕಂಟೈನ್ಮೆಂಟ್ ಮಾಡಬೇಕಾಗುತ್ತೆ.. ಕೇವಲ ಒಂದೆರಡು ಮನೆ ಸೀಲ್ ಡೌನ್ ಮಾಡಿದರೆ ಸಾಲೋದಿಲ್ಲ. ನಿಮಗೆ ಕೆಲಸ ಸುಲಭ ಆಗುತ್ತೆ ಅಂತ ಈಥರ ಮಾಡಬೇಡಿ..ಜಿಲ್ಲೆಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿ ಆಗ್ತಾ ಇದೆ..ಸೀಲ್ ಡೌನ್ ಮಾಡಿಯೂ ಊರಲ್ಲಿ ಸಾವು ಸಂಭವಿಸಿದರೆ ಸರಿಯಲ್ಲ..ಇನ್ನು ಮುಂದೆ ಏರಿಯಾನೇ ಸೀಲ್ ಡೌನ್ ಮಾಡಬೇಕು…ಕಾಟಾಚಾರಕ್ಕೆ ಒಂದೆರಡು ಮನೆ ಸೀಲ್ ಮಾಡಬೇಡಿ ಎಂದು ಹೇಳಿದ್ದು, ಕಂಟೈನ್ಮೆಂಟ್ ಝೋನ್ ದೊಡ್ಡದು ಮಾಡಬೇಕು ಅಂತ ತುಂಬಾ ದಿನದಿಂದ ಹೇಳುತ್ತಿದ್ದೇನೆ.. ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ..ಇನ್ನು ಮುಂದೆ ಯಾರಾದರೂ ಸತ್ತರೆ ನಿಮ್ಮ ಮೇಲೆ ಕ್ರಮ ಆಗುತ್ತೆ ಎಂದು ಎಸಿ, ತಹಶೀಲ್ದಾರ್ ,ವಿಲೇಜ್ ಅಕೌಂಟೆಂಟ್ ಮತ್ತು ಆರ್ ಐ ಎಚ್ಚರಿಕೆ.