UDUPI
ಕೋವಿಡ್ ಮಾರ್ಗಸೂಚಿ ಪರಿಶೀಲನೆಗೆ ಸ್ವತಃ ಫೀಲ್ಡ್ ಗಿಳಿದ ಜಿಲ್ಲಾಧಿಕಾರಿ
ಉಡುಪಿ ಜುಲೈ 22: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಲ್ಲಿರುವ ಹಿನ್ನಲೆ ಸರಕಾರದ ಕೋವಿಡ್-19 ಮಾರ್ಗಸೂಚಿ ಪರಿಶೀಲನೆ ಹಾಗೂ ಸಾರ್ವಜನಿಕರಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ್ ಮುಂಜಾಗ್ರತೆ ಹಾಗೂ ಅರಿವು ಮೂಡಿಸುವುದಕ್ಕಾಗಿ ಸ್ವತಃ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೇ ಫೀಲ್ಡ್‌ಗೆ ಇಳಿದು ವಿವಿಧೆಡೆ ದಾಳಿ ನಡೆಸಿದ್ದಾರೆ.
ಉಡುಪಿ ನಗರದ ಬಸ್ ನಿಲ್ದಾಣ, ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್, ಪ್ಲ್ಯಾಸ್ಟಿಕ್ ಶೀಟ್ ಬಳಸದ ಅಂಗಡಿ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಮಾಸ್ಕ್ ಧರಿಸದೆ ಬಸ್ ಸ್ಟ್ಯಾಂಡ್ ಬಳಿ ಗುಂಪು ಸೇರಿದ್ದ ಯುವಕರು ಡಿಸಿ ಆಗಮನ ಕಂಡು ಎಸ್ಕೇಪ್ ಆದರು. ಮಾಸ್ಕ್ ಧರಿಸದ ಕೆಲವು ಯುವಕರಿಗೆ ಸ್ಪಾಟ್ ನಲ್ಲೇ ಫೈನ್ ಕೂಡ ಹಾಕಲಾಯಿತು.
ನಗರದ ಮಾಲ್ ಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಆಗಮಿಸುತ್ತಿದ್ದಂತೆ ಮಾಲ್ ಮ್ಯಾನೇಜರ್ ಎದ್ದು ಬಿದ್ದು ಓಡಿ ಮಾಲ್ ಒಳಗೆ ಗುಂಪು ಸೇರಿದ್ದ ಜನರನ್ನು ಚದುರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಗ್ರಾಹಕರಿಗೆ ಮ್ಯಾನೇಜರ್ ತಾಕೀತು ಮಾಡಿದ್ದಾರೆ. ನಂತರ ಜಿಲ್ಲಾಧಿಕಾರಿ ಗುಂಪು ಸೇರಿಸಿ ವ್ಯಾಪಾರ ನಡೆಸದಂತೆ ಮಾಲ್ ಮ್ಯಾನೆಜರ್ ಗೆ ಸೂಚನೆ ನೀಡಿದರು.