Connect with us

UDUPI

ಉಡುಪಿಯಲ್ಲಿ ಕೊರೊನಾಗೆ ಮತ್ತೊಂದು ಬಲಿ- ಚಾಂತಾರುವಿನಲ್ಲಿ 70ರ ವೃದ್ದೆ ಸಾವು

ಉಡುಪಿ, ಜುಲೈ 23 : ಉಡುಪಿ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ಇಂದು ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.


ಅಸ್ತಮಾ, ಶೀತ-ಜ್ವರದಿಂದ ಕೆಲ ಸಮಯದಿಂದ ಬಳಲುತಿದ್ದ ಚಾಂತಾರುವಿನ 70 ವರ್ಷದ ವೃದ್ದೆ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಗಂಟಲು ದ್ರವದ ಮಾದರಿಯ ಪರೀಕ್ಷೆಯಲ್ಲಿ ವೃದ್ದೆಗೆ ಕೊರೊನಾ ಇರುವುದು ದೃಢಪಟ್ಟಿದ್ದು ಆಸ್ಪತ್ರೆಗೆ ಸೇರಿಸುವ ಸಿದ್ಧತೆ ನಡೆಯುತಿದ್ದಂತೆ ವೃದ್ಧೆ ಮನೆಯಲ್ಲೇ ಸಾವನ್ನಪ್ಪಿದ್ದಾರೆ.

Facebook Comments

comments