LATEST NEWS
ಉಡುಪಿ – ಕೊರೊನಾ ಕರ್ಪ್ಯೂ – ಸ್ವತಃ ಫೀಲ್ಡ್ ಗೆ ಇಳಿದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಉಡುಪಿ ಎಪ್ರಿಲ್ 11: ಕೊರೊನಾ ಎರಡನೇ ಅಲೆ ತಡೆಗಟ್ಟಲು ಹೇರಲಾಗಿದ್ದ ರಾತ್ರಿ ಕೊರೊನಾ ಕರ್ಪ್ಯೂ ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ನಿನ್ನೆ ರಾತ್ರಿ 10 ನಂತರ ನಗರಗಳು ಸಂಪೂರ್ಣ ಸ್ತಬ್ದವಾಗಿವೆ.
ಇನ್ನು ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಸಂಪೂರ್ಣ ಖಾಕಿ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತೆರೆದು ವಾಹನಗಳ ಪರೀಶೀಲನೆ ನಡೆಸಲಾಗಿದೆ.

ಈ ಹಿಂದೆ ಮಾಸ್ಕ್ ನಿಮಯ ಉಲ್ಲಂಘನೆ ವಿರುದ್ದ ಸ್ವತಃ ಫೀಲ್ಡ್‌ಗಿಳಿದು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡು ದಂಢ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಈಗ ರಾತ್ರಿ ಕರ್ಫ್ಯೂ ವೇಳೆಯೂ ಕಾರ್ಯಾಚರಿಸಿದ್ದಾರೆ.
ಕಲ್ಸಂಕ ಮತ್ತು ಮಣಿಪಾಲ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ವಾಹನಗಳ ತಪಾಸಣೆ ನಡೆಸಿದ್ದು ರಾತ್ರಿ 10 ಗಂಟೆ ನಂತರ ರಸ್ತೆಯಲ್ಲಿ ತಿರುಗುತಿದ್ದವರಿಗೆ ತಿಳಿಹೇಳಿದರು. ಹಾಗೆಯೇ ನಾಳೆಯಿಂದ ಇದೇ ರೀತಿ ಮುಂದುವರೆದರೆ ವಾಹನ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಇನ್ನು ಪೊಲೀಸರು 10 ಗಂಟೆಯ ನಂತರ ಬಂದ ವಾಹನಗಳ ದಾಖಲೆ ಪತ್ರ ತಪಾಸಣೆ ಮಾಡಿದರು. ಬಸ್ ಪ್ರಯಾಣಿಕರಿಗೆ ಟಿಕೇಟ್ ತೋರಿಸಿ ರಿಕ್ಷಾ, ಕಾರುಗಳಲ್ಲಿ ಸಂಚರಿಸಲು ಅನುಮತಿ ನೀಡಿದರು. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲರಿಗೆ ಸ್ಟ್ರಿಕ್ಟ್ ವಾರ್ನಿಂಗ್ ನೀಡಿದರು.