LATEST NEWS
ಉಡುಪಿಯಲ್ಲಿ ಕೈಮೀರುತ್ತಿದೆ ಕೊರೊನಾ..ಜಿಲ್ಲೆಯ ಎಲ್ಲಾ ಐಸಿಯು ಬೆಡ್ ಪುಲ್

ಉಡುಪಿ, ಸೆಪ್ಟೆಂಬರ್ 05: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲೆಯ ಎಲ್ಲಾ ಐಸಿಯು ಬೆಡ್‌ಗಳು ಫುಲ್ ಆಗಿದ್ದು. ಜನರು ಕೊರೊನಾ ವಿಚಾರದಲ್ಲಿ ನಿರ್ಲಕ್ಷ ತೋರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಸಾವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದೆರಡು ವಾರದಿಂದ ಕೊರೊನಾ ಬಗ್ಗೆ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಸೋಶಿಯಲ್ ಮೀಡಿಯಾಗಳು ತಪ್ಪು ಮಾಹಿತಿ ಜನರಿಗೆ ತಲುಪಿಸುತ್ತಿವೆ. ಜಿಲ್ಲೆಯಲ್ಲಿ ಕೊರೊನಾದ ಯಾವುದೇ ದಂಧೆ ಆಗಲಿ, ಹಣ ಮಾಡುವ ಕೆಲಸ ಇಲ್ಲಿ ನಡೆಯುತ್ತಿಲ್ಲ. ಕೊರೊನಾ ಬಗ್ಗೆ ಅಪಪ್ರಚಾರ ನಿರಂತರವಾಗಿ ನಡೆಯುತ್ತಾ ಇದೆ. ಇದರಿಂದಾಗಿ ಜನರು ಕೂಡ ಅದರಲ್ಲೂ ಹಿರಿಯರು ಹೆದರಿಕೆಯಿಂದ ತಪಾಸಣೆಗೆ ಬರುತ್ತಿಲ್ಲ.

ಇದರಿಂದ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಯಾರು ಕೂಡ ನಿರ್ಲಕ್ಷ್ಯ ವಹಿಸಬಾರದು. ನಿಮ್ಮ ಪೋಷಕರ ಮೇಲೆ ಗೌರವವಿದ್ದರೆ ಅವರನ್ನು ತಕ್ಷಣ ತಪಾಸಣೆಗೊಳಪಡಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿದರೆ ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಈ ಸಂದರ್ಭ ಎಚ್ಚರಿಸಿದರು.