LATEST NEWS
ಕೊರೊನಾ ನಡುವೆ ಉಡುಪಿ ಕಾಂಗ್ರೇಸ್ ನಲ್ಲಿ ಜೋರಾದ ಬಣ ರಾಜಕೀಯ

ಕೊರೊನಾ ನಡುವೆ ಉಡುಪಿ ಕಾಂಗ್ರೇಸ್ ನಲ್ಲಿ ಜೋರಾದ ಬಣ ರಾಜಕೀಯ
ಉಡುಪಿ ಮೇ.30: ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಈಗ ತಾರಕಕ್ಕೇರಿದ್ದು, ಕಾಂಗ್ರೇಸ್ ಪಕ್ಷದ ಬ್ಯಾನರ್ ನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪೋಟೋ ಕಾಣೆಯಾದ ಹಿನ್ನಲೆ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮುಂದೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.
ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ದಿನದಿಂದ ಏರಿಕೆ ಕಂಡು ಬರುತ್ತಿರುವ ಉಡುಪಿಯಲ್ಲಿ ಈಗ ಬಣ ರಾಜಕೀಯ ಪ್ರಾರಂಭವಾಗಿದೆ. ಕಾಂಗ್ರೇಸ್ ನ ಮಾಜಿ ಶಾಸಕ ಯು ಆರ್ ಸಭಾಪತಿ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಣಗಳ ನಡುವೆ ಪಕ್ಷದ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಮುಂದೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.

ಉಡುಪಿಗೆ ಆಗಮಿಸಿದ ಕಾಂಗ್ರೇಸ್ ಉಪಾಧ್ಯಕ್ಷ ಸಲೀಂ ಅಹ್ಮದ್ ಗೆ ಸ್ವಾಗತ ನೀಡುವ ಬ್ಯಾನರ್ ನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಪೋಟೋ ಕಾಣೆಯಾದ ಹಿನ್ನಲೆ ಪ್ರಮೋದ್ ಮಧ್ವರಾಜ್ ಅವರ ಬೆಂಬಲಿಗರು ಪ್ರಮೋದ್ ಹೆಸರಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮೋದ್ ಮಧ್ವರಾಜ್ ಅವರ ಪೋಟೋ ಹಾಕದೇ ಇರುವುದಕ್ಕೆ ಮಾಜಿ ಸಚಿವ ಸಭಾಪತಿ ಕಾರಣ ಎಂದು ಪ್ರಮೋದ್ ಮಧ್ವರಾಜ್ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕಾರ್ಯಧ್ಯಕ್ಷ ಸಲೀಮ್ ಅವರಿಂದ ಸಂಧಾನ ನಡೆಸಲು ಪ್ರಯತ್ನಿಸಿದರು.