LATEST NEWS
ಉಡುಪಿ : ನಿಗೂಢ ಕಾರಣಕ್ಕೆ ಹೊಳೆಗೆ ಹಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ..!!

ಉಡುಪಿ : ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ಮುಂದಿನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ನಾಡು ಗ್ರಾಮದಲ್ಲಿ ನಡೆದಿದೆ.

ಶಿವಪ್ರಸಾದ್ ಎಂಬವರ ಪುತ್ರ ಸುಪ್ರಜ ಶೆಟ್ಟಿ (17) ಮೃತ ವಿದ್ಯಾರ್ಥಿಯಾಗಿದ್ದಾನೆ. ನಿಗೂಢ ಕಾರಣದಿಂದ ಬೇಸತ್ತು ಮನೆ ತೋಟದ ಬಳಿ ಇರುವ ಹೊಳೆಗೆ ಹಾರಿ ಸುಪ್ರಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಪ್ರಜ ಶೆಟ್ಟಿ ಬುಧವಾರ ಬೆಳಗ್ಗೆ 9 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ತೋಟದ ಕಡೆಗೆ ಹೋಗಿ ಬರುವುದಾಗಿ ತಿಳಿಸಿ ಹೊರಗೆ ಹೋಗಿದ್ದು, ಬಳಿಕ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಗಾಬರಿಯಾದ ಮನೆಯವರು ಅಕ್ಕಪಕ್ಕ ನೆರೆಕೆರೆಯಲ್ಲಿ ಹುಡುಕಾಡಿದರೂ ಎಲ್ಲೂ ಕಾಣದಿದ್ದಾಗ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.ಆದರೆ ಕಾಣೆಯಾದ ಸುಪ್ರಜ ಶೆಟ್ಟಿ ಧರಿಸುತಿದ್ದ ಚಪ್ಪಲಿ ತೋಟದ ಹೊಳೆ ಬದಿಯ ದಡದಲ್ಲಿ ಕಂಡುಬಂದಿದ್ದು, ಹೊಳೆಯ ನೀರಿನಲ್ಲಿ ಸ್ಥಳೀಯರು ಹಾಗೂ ಮುಳುಗು ತಜ್ಞರ ಸಹಾಯದಿಂದ ಹುಡುಕಿದಾಗ ಮುಂಜಾನೆ 6 ಗಂಟೆ ಸುಮಾರಿಗೆ ಹೊಳೆಯ ದಡದಲ್ಲಿ ಮೃತ ಶರೀರ ಪತ್ತೆಯಾಯಿತು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading