LATEST NEWS
ಉಡುಪಿ : ಬೈಂದೂರು ಒತ್ತಿನೆಣೆಯಲ್ಲಿ ಸಿಮೆಂಟ್ ಟ್ರಕ್ ಪಲ್ಟಿ, ಚಾಲಕ ಮೃತ್ಯು…!
ಉಡುಪಿ : ಸಿಮೆಂಟ್ ಚೀಲಗಳು ಹೇರಿಕೊಂಡು ಹೋಗುತ್ತಿದ್ದ ಟ್ರಕ್ಕೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಒತ್ತಿನೆಣೆ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಝಾರ್ಖಂಡ್ ಮೂಲದ ದಾಮೋದರ ಯಾದವ್ (55) ಮೃತ ಪಟ್ಟ ಟ್ರಕ್ ಚಾಲಕನಾಗಿದ್ದಾನೆ . ಲೋಕಾಪುರದಿಂದ ಮಂಗಳೂರಿಗೆ ಈ ಟ್ರಕ್ ಸಿಮೆಂಟ್ ಚೀಲಗಳನ್ನು ಸಾಗುತ್ತಿತ್ತು ಎನ್ನಲಾಗಿದೆ. ಒತ್ತಿನೆಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿದ್ದು ಈ ಸಂದರ್ಭ ಚಾಲಕ ದಾಮೋದರ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ . ಬೈಂದೂರು ಪೊಲೀಸರು, ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login