LATEST NEWS
ಮಕ್ಕಳಾಟ ಆಗಿದ್ರೆ ಕೇಸ್ ಆಗ್ತಿತ್ತಾ – ಸಿಎಂ ಸಿದ್ದರಾಮಯ್ಯ

ಮಂಗಳೂರು ಅಗಸ್ಟ್ 01: ಉಡುಪಿಯ ಖಾಸಗಿ ಕಾಲೇನ ಶೌಚಾಲಯದಲ್ಲಿ ವಿಡಿಯೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಡಿವೈಎಸ್ಪಿ ತನಿಖೆ ನಡೀತಾ ಇದೆ ಅದು ಮೊದಲು ನಡೆಯಲಿ ಎಂದರು.
ಮಂಗಳೂರು ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು ಉಡುಪಿ ಕೇಸ್ ನಲ್ಲಿ ಪೊಲೀಸರು ಸುಮೋಟೋ ಎಫ್ ಐಆರ್ ಮಾಡಿದ್ದಾರೆ, ಡಿವೈಎಸ್ಪಿ ತನಿಖೆ ಆಗ್ತಿದೆ, ಡಿವೈಎಸ್ಪಿ ಲೆವೆಲ್ ತನಿಖೆ ಆಗ್ತಿರೋವಾಗ ಎಸ್ ಐಟಿ ಪ್ರಶ್ನೆ ಉದ್ಭವಿಸಲ್ಲ, ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ಇನ್ನು ತನಿಖಾ ವರದಿ ಬರಲಿ, ಆಮೇಲೆ ಈ ಬಗ್ಗೆ ಮಾತನಾಡುವ ಎಂದರು. ಕಾಲೇಜ್‌ನಲ್ಲಿ ಇರೋ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಅಂತ ಹೋಂ ಮಿನಿಸ್ಟರ್ ಹೇಳಿರಬಹುದು, ಆದರೆ ಘಟನೆಗೆ ಬಗ್ಗೆ ಎಫ್ಐಆರ್ ಆಗಿ ತನಿಖೆ ಆಗ್ತಿದೆ ಎಂದರು.
