Connect with us

    LATEST NEWS

    ಉಡುಪಿ – ಮೀನುಗಾರಿಕಾ ಋತುವಿನ ಆರಂಭದಲ್ಲೇ ಭರ್ಜರಿ ಬೊಂಡಾಸ್ ಮೀನು.!!

    ಉಡುಪಿ ಅಗಸ್ಟ್ 18: ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭವಾಗಿ ಇನ್ನು 15ದಿನಗಳಷ್ಟೇ ಕಳೆದಿದೆ. ಈ ಋತುವಿನ ಆರಂಭದಲ್ಲೇ ಮೀನುಗಾರರ ಬಲೆಗೆ ಭರ್ಜರಿಯಾಗಿ ಮೀನು ಸಿಗಲು ಆರಂಭವಾಗಿದೆ. ಇದೀಗ ಉಡುಪಿಯಲ್ಲಿ ಮೀನುಗಾರರ ಬಲೆಗೆ ಭರ್ಜರಿಯಾಗಿ ಬೊಂಡಾಸ್‌ ಮೀನುಗಳು ಬಿದ್ದಿವೆ. ಗುರುವಾರ ಮಲ್ಪೆಯ ಬಂದರಿನ ತುಂಬೆಲ್ಲ ಬೊಂಡಾಸ್‌ ಮೀನು ರಾಶಿ ಹಾಕಲಾಗಿತ್ತು.


    ಆಳಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ಗಳಿಗೆ ಭರ್ಜರಿಯಾಗಿ ಬೊಂಡಾಸ್ ಸಿಕ್ಕಿದೆ. ಪ್ರತಿ ಬೋಟ್‌ಗೂ ತಲಾ 5 ರಿಂದ 6 ಟನ್‌ನಷ್ಟು ಬೊಂಡಾಸ್‌ ಲಭ್ಯವಾಗಿದೆ ಎಂದು ಹೇಳಲಾಗಿದೆ. ಆದರೆ ಭರ್ಜರಿಯಾಗಿ ಬೊಂಡಾಸ್‌ ಸಿಕ್ಕರೂ ಲಾಭ ಮಾತ್ರ ಮೀನುಗಾರರಿಗೆ ದಕ್ಕಲಿಲ್ಲ. ಮಾರುಕಟ್ಟೆಗೆ ಬೇಡಿಕೆಗಿಂತ ಹಲವು ಪಟ್ಟು ಹೆಚ್ಚು ಬೊಂಡಾಸ್‌ ಪೂರೈಕೆಯಾಗಿದ್ದರಿಂದ ಬೆಲೆ ದಿಢೀರ್ ಕುಸಿತವಾಯಿತು.


    ಸಾಮಾನ್ಯವಾಗಿ ದೊಡ್ಡಗಾತ್ರದ (ಎ ಗ್ರೇಡ್‌) ಬೊಂಡಾಸ್‌ ಕೆ.ಜಿಗೆ ₹ 400 ರಿಂದ ₹ 500ಕ್ಕೆ ಮಾರಾಟವಾಗುತ್ತಿತ್ತು. ಗುರುವಾರ ಕೆ.ಜಿಗೆ ₹ 80 ರಿಂದ ₹ 100ಕ್ಕೆ ಇಳಿಕೆಯಾಗಿತ್ತು. ಖರೀದಿದಾರರು ಇಲ್ಲದೆ ಮೀನುಗಾರರು ಆತಂಕದಲ್ಲಿದ್ದ ದೃಶ್ಯಗಳು ಬಂದರಿನಲ್ಲಿ ಕಾಣುತ್ತಿತ್ತು. ಬೊಂಡಾಸ್‌ಗೆ ಸ್ಥಳೀಯವಾಗಿ ಬೇಡಿಕೆ ಇಲ್ಲ. ಗೋವಾ, ಗುಜರಾತ್ ಸೇರಿದಂತೆ ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಇತರ ಜಾತಿಯ ಮೀನುಗಳಂತೆ ಬೊಂಡಾಸ್ ಅನ್ನು ಸ್ಥಳೀಯರು ಹೆಚ್ಚಾಗಿ ಖರೀದಿ ಮಾಡದ ಪರಿಣಾಮ ದರ ಭಾರಿ ಕುಸಿತವಾಗಿದೆ ಎಂದು ಹೇಳಿದರು. ಸಾಮಾನ್ಯವಾಗಿ ಅತಿ ಹೆಚ್ಚು ಬೇಡಿಕೆ ಇರುತ್ತಿದ್ದ ಬೊಂಡಾಸ್‌ ಮೀನನ್ನು ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ. ಹಾಕಿದ ಬಂಡವಾಳವೂ ಮರಳಿ ಬರುವ ವಿಶ್ವಾಸ ಇಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *