Connect with us

    DAKSHINA KANNADA

    ಉಪ್ಪಿನಂಗಡಿ – ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪ…!!

    ಉಪ್ಪಿನಂಗಡಿ ಅಗಸ್ಟ್ 18: ತಂದೆಯೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ವೆಸಗಿ ಗರ್ಭಿಣಿಯಾಗಿಸಿದ ಘಟನೆ ಗೋಳಿತ್ತೂಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.


    ಗೋಳಿತೊಟ್ಟು ಗ್ರಾಮಪಂಚಾಯತ್ ನಿವಾಸಿ ತನ್ನ ಸ್ವಂತ ಮಗಳ ಮೇಲೆ ಕೆಲವು ತಿಂಗಳುಗಳ ಹಿಂದೆ ಅತ್ಯಾಚಾರ ವೆಸಗಿದ್ದಾನೆ. ಇತ್ತೀಚೆಗೆ ಮಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾದಾಗ ತಾಯಿ ಮಗಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ ಮಗಳು ಗರ್ಭಿಣಿ ಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ತೆ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply