LATEST NEWS
ಮರಳು ಪರವಾನಿಗೆ ನೀಡದಿದ್ದರೆ ನವೆಂಬರ್ 10 ರಂದು ಉಡುಪಿ ಜಿಲ್ಲಾ ಬಂದ್

ಮರಳು ಪರವಾನಿಗೆ ನೀಡದಿದ್ದರೆ ನವೆಂಬರ್ 10 ರಂದು ಉಡುಪಿ ಜಿಲ್ಲಾ ಬಂದ್
ಉಡುಪಿ ನವೆಂಬರ್ 1: ಉಡುಪಿ ಜಿಲ್ಲೆಯಲ್ಲಿ ಮರಳು ಪರವಾನಿಗೆ ನೀಡದಿದ್ದಲ್ಲಿ ನವೆಂಬರ್ 10 ರಂದು ಉಡುಪಿ ಜಿಲ್ಲಾ ಬಂದ್ ನಡೆಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮರಳಿಗಾಗಿ ಹೋರಾಟ ಸಮಿತಿ ನಡೆಸುತ್ತಿರುವ ಆಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಮರಳು ತೆಗೆಯಲು ಪರವಾನಗಿ ನೀಡಿದ್ದ 170 ಗುತ್ತಿಗೆದಾರರಿಗೆ ಈ ಬಾರಿಯೂ ಪರವಾನಗಿ ನೀಡಬೇಕು. ಮರಳುಗಾರಿಕೆ ಪ್ರಾರಂಭವಾಗದಿದ್ದರೆ ನವೆಂಬರ್ 10ರಂದು ಉಡುಪಿ ಜಿಲ್ಲೆ ಬಂದ್ ನಡೆಸಲಾಗುವುದು. ಈ ಬಗ್ಗೆ ಮರಳು ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಯಬಾರದು ಎಂದು ರಾಜ್ಯ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತ ಹಠಕ್ಕೆ ಬಿದ್ದಿದೆ. ಮುಖ್ಯಮಂತ್ರಿಗಳ ಮಾತಿಗೆ ಜಿಲ್ಲಾಧಿಕಾರಿ ಬೆಲೆ ನೀಡಿಲ್ಲ, ಸಿಎಂ ಅವರ ಮೇಲೆ ಕ್ರಮ ತೆಗೆದುಕೊಳ್ಳದೇ ಜಿಲ್ಲಾಧಿಕಾರಿ ಕ್ರಮವನ್ನು ಸಮರ್ಥಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಹೋರಾಟವನ್ನು ಮುಖ್ಯಮಂತ್ರಿ ಕಚೇರಿಯವರೆಗೆ ತೆಗೆದುಕೊಂಡು ಹೋಗುವುದಕ್ಕೂ ನಾವು ಸಿದ್ಧ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ನವೆಂಬರ್ 10ರ ನಂತರ ಜಿಲ್ಲಾದ್ಯಂತ ನಿರ್ಮಾಣ ಕಾಮಗಾರಿ, ವ್ಯವಹಾರಗಳನ್ನು ಸ್ವಯಂ ಪ್ರೇರಣೆಯಿಂದ ನ್ಯಾಯ ಸಿಗುವರೆಗೆ ಸ್ಥಗಿತಗೊಳಿಸಬೇಕು. ಸಿಆರ್‌ಝಡ್ ಮತ್ತು ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಎಲ್ಲ 170 ಗುತ್ತಿಗೆದಾರರಿಗೆ ಮರಳು ತೆಗೆಯುುವ ಪರವಾನಗಿ ನೀಡುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲಾಗುವುದು.