LATEST NEWS
ಉಡುಪಿ : ಗ್ಯಾಸ್ ಸಾಗಾಟದ ವಾಹನಕ್ಕೆ ಬೈಕ್ ಡಿಕ್ಕಿ, ಸವಾರ ಮೃತ್ಯು..!
ಬೈಕೊಂದು ಗ್ಯಾಸ್ ಸಾಗಾಟ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉಡುಪಿ( udupi) ಜಿಲ್ಲೆ ಗಂಗೊಳ್ಳಿ ಮುಳ್ಳಿಕಟ್ಟೆ ಸಮೀಪ ಆರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ನಡೆದಿದೆ.
ಉಡುಪಿ: ಬೈಕೊಂದು ಗ್ಯಾಸ್ ಸಾಗಾಟ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉಡುಪಿ( udupi) ಜಿಲ್ಲೆ ಗಂಗೊಳ್ಳಿ ಮುಳ್ಳಿಕಟ್ಟೆ ಸಮೀಪ ಆರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ನಡೆದಿದೆ.
ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬವರ ಪುತ್ರ ರಂಜಿತ್ ಬಲ್ಲಾಳ್(59) ಮೃತ ದುರ್ದೈವಿಯಾಗಿದ್ದಾನೆ. ರಂಜಿತ್ ಬಲ್ಲಾಳ್ ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್, ಗ್ಯಾಸ್ ವಾಹನಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.