LATEST NEWS
ಉಡುಪಿ ಬ್ರಹ್ಮಗಿರಿ ಸಾವರ್ಕರ್ ಬ್ಯಾನರ್ ಗೆ ಪೊಲೀಸ್ ಬಂದೋಬಸ್ತ್ ….!!

ಉಡುಪಿ ಅಗಸ್ಟ್ 17: ಉಡುಪಿ ಬ್ರಹ್ಮಗಿರಿಯಲ್ಲಿ ಸರ್ಕಲ್ ನಲ್ಲಿ ಹಾಕಿರುವ ಸಾವರ್ಕರ್ ಬ್ಯಾನರ್ ಗೆ ಮೂರನೇ ದಿನವೂ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಉಡುಪಿ, ಮಲ್ಪೆ, ಕೋಟ ಪೊಲೀಸರಿಂದ ಬ್ರಹ್ಮಗಿರಿ ಸರ್ಕಲ್ ಗೆ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಂಡಿದ್ದಾರೆ.
ಇಂದು ಹಿಂದೂ ಸಂಘಟನೆ ಮುಖಂಡ ಯಶ್ ಪಾಲ್ ಸುವರ್ಣ ಅವರು ಬ್ರಹ್ಮಗಿರಿ ಸರ್ಕಲ್ ನಲ್ಲಿರುವ ಸಾವರ್ಕರ್ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿದರು. ಬಿಜೆಪಿ ಯುವ ಮೋರ್ಚಾ ಕೂಡ ಪುಷ್ಪಾರ್ಚನೆಗೆ ಸಿದ್ಧತೆ ನಡೆಸಿದೆ. ಅಲ್ಲದೆ ಭಾವಚಿತ್ರದ ಹಿನ್ನಲೆ ಕಾಂಗ್ರೆಸ್ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಬಂದೋಬಸ್ತು ಕಲ್ಪಿಸಿದ್ದಾರೆ. 15 ದಿನಗಳ ಕಾಲ ಬ್ರಹ್ಮಗಿರಿಯಲ್ಲಿ ಬ್ಯಾನರ್ ಹಾಕಲು ಹಿಂದೂ ಮಹಾಸಭಾದ ಪ್ರಮೋದ್, ಉಚ್ಚಿಲ್ ಅನುಮತಿ ಪಡೆದಿದ್ದಾರೆ.
