Connect with us

    LATEST NEWS

    ಉಡುಪಿ -ತನ್ನ ಮಗಳ ಹುಟ್ಟುಹಬ್ಬದ ಕೇಕ್ ಖರೀದಿಗೆ ಬಂದಿದ್ದ ಅಪ್ಪ ಅಪಘಾತದಲ್ಲಿ ಸಾವು…!!

    ಉಡುಪಿ ಫೆಬ್ರವರಿ 12 : ತನ್ನ ಮಗಳ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಗೆ ಬಂದಿದ್ದ ಅಪ್ಪ ಅಪಘಾತದಲ್ಲಿ ಸಾವನಪ್ಪಿದ ಧಾರುಣ ಘಟನೆ ಉಡುಪಿಯ ದೊಡ್ಡಣಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಸ್ಕೂಟರ್ ಗೆ ನೀರಿನ ಟ್ಯಾಂಕರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತದ ಸಂಭವಿಸಿದೆ.


    ಮೃತರನ್ನು ಎಪಿಎಂ ಸಿಟಿ ಬಸ್ ಚಾಲಕ ಮಂಜುನಾಥ್ (36) ಎಂದು ಗುರುತಿಸಲಾಗಿದೆ. ಅವರು ಇಂದು ಸಂಜೆ ತಮ್ಮ ಸ್ಕೂಟರ್ ನಲ್ಲಿ ಬಾಳಿಗ ಹಾಸ್ಪಿಟಲ್ ದೊಡ್ಡಣಗುಡ್ಡೆಯಿಂದ ಪೆರಂಪಳ್ಳಿಯ ತಮ್ಮ ಬಾಡಿಗೆ ಮನೆಗೆ ಹೋಗುತ್ತಿದ್ದರು.
    ಈ ವೇಳೆ ನೀರಿನ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರು ತಮ್ಮ ಮಗಳ 2ನೇ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಕೇಕ್ ಕೊಂಡು ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply